ಬೆಂಗಳೂರಿನಲ್ಲಿ ಕೇವಲ 44.5 % ಜನರು ಮಾತ್ರ ಕನ್ನಡ ಮಾತನಾಡುತ್ತಾರೆ: ಸರ್ವೆಯಿಂದ ಹೊರ ಬಿತ್ತು ಸತ್ಯ.

ಬೆಂಗಳೂರಿನಲ್ಲಿ ಕೇವಲ 44.5 % ಜನರು ಮಾತ್ರ ಕನ್ನಡ ಮಾತನಾಡುತ್ತಾರೆ: ಸರ್ವೆಯಿಂದ ಹೊರ ಬಿತ್ತು ಸತ್ಯ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಅಧ್ಯಯನದಲ್ಲಿ ಆ ಅಂಶವು ಹೊರಬಿದ್ದಿದ್ದು ಬೆಂಗಳೂರಿನಲ್ಲಿ 107 ಭಾಷೆಗಳನ್ನು ಮಾತನಾಡುವ ಜನರಿದ್ದು ಮೆಟ್ರೋ ನಗರವಾಗಿ ಬೆಂಗಳೂರು ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವ ನಗರವಾಗಿ ಗುರುತಿಸಲ್ಪಟ್ಟಿದೆ.

ಕರ್ನಾಟಕವು ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದೊಂದಿಗೆ ಒಂದೇ ರೀತಿಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹಂಚಿಕೊಳ್ಳುವುದರಿಂದ, ನಗರವು ತಮಿಳು ಮತ್ತು ತೆಲುಗು ಮಾತನಾಡುವ ಪ್ರಮುಖ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಲಾಗಿದ್ದು.

ಬ್ರಿಟಿಷ್ ಆಳ್ವಿಕೆಯಲ್ಲಿ ಬೆಂಗಳೂರು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿತ್ತು ಮತ್ತು ತಮಿಳುನಾಡಿನಿಂದ ಕೆಜಿಎಫ್ ಚಿನ್ನದ ಗಣಿಗಳಲ್ಲಿ ಕೆಲಸ ಮಾಡಲು ಅಪಾರ ಜನಸಂಖ್ಯೆಯನ್ನು ಕರೆತರಲಾಯಿತು ಆಗ ಅನೇಕ ಕಾರ್ಮಿಕರು ಬೆಂಗಳೂರಿನಲ್ಲಿ ನೆಲೆಸಿದರು. ಬೆಂಗಳೂರಿನ ಕೆಲವು ಭಾಗಗಳು ಮತ್ತು ಮೈಸೂರಿನಲ್ಲಿ ಇನ್ನೂ ತಮಿಳು ಜನಸಂಖ್ಯೆಯ ಗಮನಾರ್ಹ ಅಸ್ತಿತ್ವವಿದೆ ಎಂದು ತಿಳಿದುಬಂದಿದೆ.

ಸಮೀಕ್ಷೆಯ ಪ್ರಕಾರ, ಬೆಂಗಳೂರಿನ ಜನಸಂಖ್ಯೆಯ 15% ತಮಿಳು ಮಾತನಾಡುತ್ತಾರೆ ಮತ್ತು 14% ತೆಲುಗು ಮತ್ತು 3% ಮಲಯಾಳಂ ಭಾಷೆಯನ್ನುಜನರು ಮಾತನಾಡುತ್ತಾರೆ.

ಶಿವಾಜಿನಗರ, ಪುಲಕೇಶಿನಗರ, ಚಾಮರಾಜಪೇಟೆ, ಬೊಮ್ಮನಹಳ್ಳಿ ಮತ್ತು ಜಯನಗರ ಸೇರಿದಂತೆ ಹಲವಾರು ಅಲ್ಪಸಂಖ್ಯಾತ ಜನಸಮುದಾಯ ಹೊಂದಿರುವ ಉರ್ದು ಭಾಷೆ 12% ಕಂಡು ಬಂದಿದೆ

ಬೆಂಗಳೂರು ಹೊರತುಪಡಿಸಿ, ನಾಗಾಲ್ಯಾಂಡ್‌ನ ಡಿಂಪಾರ್ 103 ಭಾಷೆಗಳನ್ನು ಹೊಂದಿದೆ ಎಂದು ವರದಿ ಮಾಡಿದ್ದು ಅಸ್ಸಾಂನ ಸೋನಿತ್ಪುರ್ ಜಿಲ್ಲೆಯು 101 ಭಾಷೆಗಳನ್ನು ಹೊಂದಿದೆ.

ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ 90 ಭಾಷೆಗಳಿವೆ. ಅದೇ ರೀತಿ, ದಕ್ಷಿಣ ದೆಹಲಿಯು 97 ಭಾಷೆಗಳನ್ನು ಹೊಂದಿದೆ ಎಂದು ಸರ್ವೆಯಲ್ಲಿ ಗೊತ್ತಾಗಿದೆ.

Related Stories

No stories found.
TV 5 Kannada
tv5kannada.com