ಆನ್‌ಲೈನ್‌ ಗ್ಯಾಂಬ್ಲಿಂಗ್‌ಗೆ ನಿಷೇಧಕ್ಕೆ ಕ್ಯಾಬಿನೆಟ್‌ ನಿರ್ಧಾರ..?

ಆನ್‌ಲೈನ್‌ ಗ್ಯಾಂಬ್ಲಿಂಗ್‌ಗೆ ನಿಷೇಧಕ್ಕೆ ಕ್ಯಾಬಿನೆಟ್‌ ನಿರ್ಧಾರ..?
gambling online

ಯುವಜನತೆಯನ್ನ ಹಾಳುಮಾಡ್ತಿರೋ ಆನ್ ಲೈನ್ ಜೂಜಾಟಗಳಿಗೆ ಬ್ರೇಕ್ ಹಾಕೋಕೆ ಸರ್ಕಾರ ನಿರ್ಧರಿಸಿದೆ..ಅಲ್ಲದೆವಾರ್ಡ್ ಮರು ವಿಂಗಡಣೆ ನೆಪದಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆ ಮುಂದೂಡೋಕೆ ಸರ್ಕಾರ ಡಿಲಿಮಿಟೇಶನ್ ಕಮೀಷನ್ ರಚನೆಗೆ ಮುಂದಾಗಿದೆ..ಇದ್ರ ಜೊತೆಗೆ ಇನ್ನೂ ಕೆಲವು ಪ್ರಮುಖ ನಿರ್ಧಾರಗಳನ್ನ ಇಂದಿನ ಕ್ಯಾಬಿನೆಟ್ ಸಭೆಯಲ್ಲಿತೆಗೆದುಕೊಳ್ಳಲಾಗಿದೆ..

ರಾಜ್ಯದಲ್ಲಿ ಇತ್ತೀಚಿಗೆ ಆನ್‌ಲೈನ್ ಗ್ಯಾಂಬ್ಲಿಂಗ್ ಜೋರಾಗಿದೆ. ಇದ್ರಿಂದ ಯುವಜನತೆ ಅಡ್ಡದಾರಿ ತುಳಿಯುತ್ತಿದ್ದಾರೆ. ಹಣಕ್ಕಾಗಿ ಅಪರಾಧ ಕೃತ್ಯಗಳಿಗೆ ಇಳೀತಿದ್ದಾರೆ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಕಾರಣ, ಇಂತಹ ಆನ್‌ಲೈನ್ ಜೂಜಾಟಗಳಿಗೆ ಬ್ರೇಕ್ ಹಾಕಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇಂದು ಸಿಎಂ ಸಮ್ಮುಖದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೀತು.. ಈ ಸಭೆಯಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಸೆಪ್ಟಂಬರ್ 13ರಿಂದ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಈ ಬಿಲ್ ಮಂಡನೆಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಸದನದಲ್ಲಿ ಈ ಬಿಲ್ ಮಂಡನೆಯಾಗಿ ಒಪ್ಪಿದ್ದೇ ಆದ್ರೆ, ಕರ್ನಾಟಕದಲ್ಲಿ ಶೀಘ್ರದಲ್ಲೇ ಆನ್‌ಲೈನ್ ಗೇಮಿಂಗ್‌ಗಳಾದ ಇಸ್ಪೀಟ್, ರಮ್ಮಿ, ಕ್ರಿಕೆಟ್‌ ಸೇರಿದಂತೆ ಎಲ್ಲದ್ದಕ್ಕೂ ಕಡಿವಾಣ ಬೀಳಲಿದೆ.

ಇನ್ನು ಇವತ್ತಿನ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯ್ತು.. ಅವುಗಳು ಯಾವುವು ಅನ್ನೋದನ್ನ ನೋಡೋದಾದ್ರೆ..

1. ಕೃಷಿ ಬೀಜ ನಿಗಮಕ್ಕೆ ೨೦ ಕೋಟಿ ಸಾಲ ಪಡೆಯಲು ಶ್ಯೂರಿಟಿ

2. ಬೆಂಗಳೂರಿನಲ್ಲಿ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಅನುಮತಿ

3. ಮೈಸೂರು ಅರಮನೆ ಫೋಟೋ ಶೂಟ್‌ ಕೇಸ್‌ನ 2 ಆರೋಪ ಕೈಬಿಡಲು ನಿರ್ಧಾರ

4. ಶಿಕ್ಷಕರ ವರ್ಗಾವಣೆ, ಸರುಕು ಸೇವೆ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

5. ಸಿದ್ದಗಂಗಾ ಶ್ರೀಗಳ ಹುಟ್ಟೂರು ವೀರಾಪುರದ ಅಭಿವೃದ್ಧಿಗೆ ೨೫ ಕೋಟಿ ಅನುದಾನ

6. ಭದ್ರಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನ

7. ಎಸ್ಸಿ-ಎಸ್ಟಿ ಐಟಿಐ ವಿದ್ಯಾರ್ಥಿಗಳ ಟೂಲ್ ಕಿಟ್ ಖರೀದಿಗೆ ೧೭.೧೮ ಕೋಟಿ ಅನುದಾನ

8. ಜಕ್ಕೂರಿನಲ್ಲಿರುವ ರಾಜೀವ್ ವೈಮಾನಿಕ ತರಬೇತಿ ಸೊಸೈಟಿಗೆ ನೀಡಿದ್ದ ಅನುಮತಿ ವಾಪಸ್

ಇನ್ನು ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮುಂದೂಡಿಕೆಗೆ ಸರ್ಕಾರ ಪ್ರಯತ್ನ ನಡೆಸಿದ್ಯಾ ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ, ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ ವಾರ್ಡ್ ವಿಂಗಡಣೆ ನೆಪವೊಡ್ಡಿ, ಅದಕ್ಕಾಗಿ ಡಿಲಿಮಿಟೇಶನ್ ಕಮೀಷನ್ ರಚನೆ ಮಾಡಲು ತೀರ್ಮಾನಿಸಿದೆ. ಚುನಾವಣಾ ಆಯೋಗ ಮಾಡಿರುವ ಪುನರ್ ವಿಂಗಡಣೆಯ ಬಗ್ಗೆ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸೋಕೆ ತೀರ್ಮಾನಿಸಿದೆ. ಒಂದು ವೇಳೆ ಕೋರ್ಟ್‌ ಅನುಮತಿ ಕೊಟ್ಟರೆ ವಾರ್ಡ್ ಮರು ವಿಂಗಡಣೆ ಮಾಡೋಕೆ ಸರ್ಕಾರ ಪ್ರಯತ್ನ ನಡೆಸಿದೆ. ಹೀಗಾಗಿ ಚುನಾವಣೆಯನ್ನ ಮುಂದೂಡಿಕೆ ಮಾಡುವ ಹುನ್ನಾರ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನ ತೆಗೆದುಕೊಳ್ಳಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ, ಶೀಘ್ರದಲ್ಲೇ ಕರ್ನಾಟಕದಲ್ಲೂ ಆನ್‌ಲೈನ್‌ ಗ್ಯಾಂಬ್ಲಿಂಗ್‌ಗೆ ಬ್ರೇಕ್‌ ಬೀಳಬಹುದು..

Related Stories

No stories found.
TV 5 Kannada
tv5kannada.com