Monday, January 30, 2023

ಕಾಟಾಚಾರದ ರೈತ ದಸರಾ.. ಕ್ರೀಡಾ ಪ್ರೇಮಿಗಳಿಗೆ ನಿರಾಸೆ..!

Must read

ನಂಜನಗೂಡು ತಾಲೂಕು ಆಡಳಿತದ ಎಟವಟ್ಟಿಗೆ ಗ್ರಾಮೀಣ ಮತ್ತು ರೈತ ದಸರಾ ಕ್ರೀಡಾಕೂಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ಮಟ್ಟದ ರೈತ ದಸರಾವನ್ನು ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ನಿನ್ನೆ ಸಂಜೆ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಿ, ತಾಲೂಕಿನ ಮಹದೇವನಗರದ ಮುಳ್ಳೆಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜನೆ ಮಾಡಿದ್ದಾರೆ. ಬಳಿಕ ಸ್ಥಳ ಬದಲಾವಣೆ ಮಾಡಿರುವ ವಿಷಯ ಸಾರ್ವಜನಿಕರಿಗೆ ತಿಳಿಸುವಲ್ಲಿ ತಾಲೂಕು ಆಡಳಿತ ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಸ್ಪರ್ಧಿಗಳು ದೊಡ್ಡಕವಲಂದೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬಂದು ವಾಪಸ್​ ತೆರಳಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಜೊತೆಗೆ ಜಾನಪದ ಗೀತೆ, ಭಾವಗೀತೆ, ರಂಗಗೀತೆ, ಸೋಬಾನೆ ಪದ ಸ್ಪರ್ಧೆಯನ್ನು ಏರ್ಪಡಿಸಿದರು. ಆದರೆ ತಾಲೂಕು ಆಡಳಿತದ ಎಡವಟ್ಟಿನಿಂದ ಕಾರ್ಯಕ್ರಮ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾ.ಪಂ ಪಿಡಿಒಗಳಿಗಷ್ಟೇ ಸೀಮಿತವಾಗಿದೆ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮೀಣ ದಸರಾ, ರೈತ ದಸರಾ ಮೂಲಕ ಗ್ರಾಮೀಣ ಭಾಗದ ಸಂಗೀತ, ಜಾನಪದ ನೃತ್ಯ, ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಸುತ್ತಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಮಾರಂಭ ಕಾಟಾಚಾರಕ್ಕೆ ನಡೆದಿರುವುದು ಗ್ರಾಮೀಣ ಭಾಗದ ಕ್ರೀಡಾ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.

Latest article