Sunday, October 2, 2022

ಲೇಟರ್​ ಬರೆದಿಟ್ಟು ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಎಸ್ಕೇಪ್​

Must read

ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಪತ್ರ ಬರೆದಿಟ್ಟು ಹಾಸ್ಟೆಲ್​ ಕಿಟಕಿ ಮುರಿದು ಹಾಸ್ಟೆಲ್​ನಿಂದ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಿಯುಸಿ ವಿದ್ಯಾರ್ಥಿನಿಯರಾಗಿರುವ ಬೆಂಗಳೂರಿನ ಯಶಸ್ವಿನಿ, ದಕ್ಷತಾ ಚಿತ್ರದುರ್ಗ ಮೂಲದ ಸಿಂಚನಾ ಹಾಸ್ಟಲ್​ನಿಂದ ಪರಿಯಾಗಿದ್ದಾರೆ. ನಾವು ಹೋಗುತ್ತಿದ್ದೇವೆ, ನಮ್ಮನು ಕ್ಷಮಿಸಿ ಅಂತಾ ನೋಟ್ ಬರೆದಿಟ್ಟು ವಿದ್ಯಾರ್ಥಿಗಳು ಎಸ್ಕೇಪ್​ ಆಗಿದ್ದಾರೆ. ಮುಂಜಾನೆ 3 ಗಂಟೆ ವೇಳೆಗೆ ಮೂವರು ವಿದ್ಯಾರ್ಥಿಗಳು ಬ್ಯಾಗ್​ ಹಿಡಿದುಕೊಂಡು ಹಾಸ್ಟಲ್​ನ ಆವರಣದಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹಾಸ್ಟೆಲ್​ಗೆ ಮಂಗಳೂರು ನಗರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು

Latest article