Sunday, October 2, 2022

ಸಾವರ್ಕರ್ ಅಪ್ರತಿಮ ದೇಶಭಕ್ತ..ಈ ಘಟನೆ ಪೂರ್ವ ನಿಯೋಜಿತ-ಸುನೀಲ್​ ಕುಮಾರ್

Must read

ಉಡುಪಿ: ಸಾರ್ವಕರ್ ಭಾವಚಿತ್ರಕ್ಕೆ ಆಕ್ಷೇಪಣೆ ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಸುನೀಲ್​ ಕುಮಾರ್​ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಎರಡು ಕರಿನೀರಿನ ಶಿಕ್ಷೆ ಅನುಭವಿಸಿರುವ ಹೋರಾಟಗಾರ. ಸಾವರ್ಕರ್ ಅವರ ಬಗ್ಗೆ ಗೊತ್ತಾಗಲು ಅಂಡಾಮಾನ್​ಗೆ ಭೇಟಿ ಮಾಡಬೇಕು. ಸಾರ್ವಕರ್ ಬಗ್ಗೆ ಆಕ್ಷೇಪಣೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಾವರ್ಕರ್​ ಅವರನ್ನು ಆಕ್ಷೇಪಿಸುವುದು ಎಂದರೆ ಸ್ವಾತಂತ್ರ್ಯವನ್ನು ಆಕ್ಷೇಪಿಸಿದಂತೆ ಎಂದಿದ್ದಾರೆ.

ಇನ್ನು ಸಾವರ್ಕರ್ ಅಪ್ರತಿಮ ದೇಶಭಕ್ತ. ಪಿಎಫ್​ಐ ವಿರೋಧಿಸುತ್ತದೆ ಎಂದರೆ ಸಾವರ್ಕರ್ ಫೋಟೋ ತೆಗೆಯಲು ಸಾಧ್ಯವಿಲ್ಲ. ಈ ಘಟನೆ ಒಂದು ವ್ಯವಸ್ಥಿತ ಷಡ್ಯಂತ್ರ. ಸಣ್ಣ ಘಟನೆ ಇಟ್ಟುಕೊಂಡು ಅಶಾಂತಿ ಸೃಷ್ಟಿಸಲು ಪಿಎಫ್ಐ ಸಂಘಟನೆ ಯತ್ನಿಸುತ್ತಿದೆ. ಸರ್ಕಾರ ಇಂಥವರನ್ನು ಹದ್ದುಬಸ್ತಿನಲ್ಲಿ ಇಡುತ್ತದೆ. ಪೊಲೀಸ್ ಇಲಾಖೆ, ಗೃಹ ಇಲಾಖೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತದೆ. ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪಿಸಿದರು.

Latest article