Thursday, August 18, 2022

ಸಿಎಂ ಆಗಿದ್ದವರನ್ನು ಜೈಲಿನಲ್ಲಿ ಕೂರಿಸೋದು ಯಾಕೋ ನಮಗೆ ಸಮಾಧಾನವಾಗುತ್ತಿಲ್ಲ: ಈಶ್ವರಪ್ಪ

Must read

ಶಿವಮೊಗ್ಗ: ಮುಖ್ಯಮಂತ್ರಿಯಾಗಿದ್ದವರು, ಮಂತ್ರಿಯಾಗಿದ್ದವರಿಗೆ ಸಾಮಾನ್ಯ ಜ್ಞಾನ ಇರುತ್ತದೆ. ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸೋದು ಬಹಳ ದೊಡ್ಡ ವಿಷಯ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಪಾದಯಾತ್ರೆ ವಿಷಯದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ಬೇಡ ಅಂತ ಮನವಿ ಮಾಡಿದ್ದೇವೆ, ನಮಸ್ಕಾರ ಮಾಡಿದ್ದೇವೆ. ಕೋವಿಡ್ ಮುಗಿದ ಮೇಲೆ ನೀವು ಎಷ್ಟಾದರೂ ಪಾದಯಾತ್ರೆ ಮಾಡಿ ನಾವು ಬೇಡ ಅಂತ ಹೇಳಿಲ್ಲ. ಅವರನ್ನು ಅರೆಸ್ಟ್ ಮಾಡಬೇಕು ಎನ್ನುವ ಮಟ್ಟಕ್ಕೆ ಹೋಗಬಾರದು ಎನ್ನುವ ವಿಚಾರದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಕೋರ್ಟ್ ಇಂತಹದ್ದು ಮಾಡಿ ಎಂದು ಸೂಚನೆ ಕೊಟ್ಟರೆ ಖಂಡಿತ ನಾವು ಮಾಡ್ತೀವಿ.

ಮುಖ್ಯಮಂತ್ರಿಗಳು ಆಗಿದ್ದಂತಹವರನ್ನು ಕರೆದುಕೊಂಡು ಹೋಗಿ ಜೈಲಿಗೆ ಕಳುಹಿಸೋದು ನಮಗೆ ಸಮಾಧಾನ ಇಲ್ಲ. ಕೋವಿಡ್ ವಿಚಾರದಲ್ಲಿ ಸರ್ಕಾರದ ಗೈಡ್​ಲೈನ್ಸ್ ಪ್ರಕಾರ ರಾಜ್ಯದ ಜನ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರ ಇದನ್ನು ಮೀರುತ್ತಿದ್ದಾರೆ. ಪಾದಯಾತ್ರೆಗೆ ಹೋಗಿ ಬಂದ ಕಾರ್ಯಕರ್ತರಲ್ಲಿ ಎಷ್ಟು ಜನಕ್ಕೆ ಕೋವಿಡ್ ಅಂಟಿದೆಯೋ ನನಗೆ ಗೊತ್ತಿಲ್ಲ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ರೇವಣ್ಣ, ಶಿವಶಂಕರ್ ರೆಡ್ಡಿ, ಅಜಯ್ ಸಿಂಗ್, ಇಬ್ರಾಹಿಂ ಅವರುಗಳಿಗೆ ಕೋವಿಡ್ ಬಂದಿದೆ. ಮೇಲ್ನೋಟಕ್ಕೆ ನಾಯಕರುಗಳಿಗೆ ಕೋವಿಡ್ ಬಂದಿದೆ.

ಕೋರ್ಟ್ ನಿರ್ದೇಶನ ನೀಡಿದ ಮೇಲೆ ಪಾದಯಾತ್ರೆ ನಿಲ್ಲಿಸೋದು ದೊಡ್ಡ ಕೆಲಸ ಅಲ್ಲ. ನಮಗೆ ಅರೆಸ್ಟ್ ಮಾಡಬೇಕು ಎಂಬ ಉದ್ದೇಶ ಖಂಡಿತಾ ಇಲ್ಲ. ನಿಮಗೆ ಗೌರವ ಕೊಡಬೇಕು ಅಂತಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ, ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾದಯಾತ್ರೆ ನಿಲ್ಲಿಸಿ. ಜನರ ಆರೋಗ್ಯ ಕೆಡಿಸಬೇಡಿ. ನಾನು ಸಹ ಕೋವಿಡ್ ಟೆಸ್ಟ್ ಮಾಡಿಸಿದ್ದೇನೆ. ನನಗೆ ಏನು ಆಗಿಲ್ಲ ಎಂದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸಚಿವರು, ಶಾಸಕರ ಪಕ್ಷಾಂತರ ವಿಚಾರವಾಗಿ ಮಾತನಾಡಿ, ಬಿಜೆಪಿ ಇಡೀ ರಾಷ್ಟ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ಇಂತಹ ಸಂದರ್ಭದಲ್ಲಿ ನಮ್ಮ‌ ಪಕ್ಷದ ರಾಷ್ಟ್ರೀಯ ನಾಯಕರು ಹೊಸ ಮುಖಗಳಿಗೆ, ಯುವಕರಿಗೆ ಅವಕಾಶ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ರಾಜಕಾರಣ ಇರುವ ವರೆಗೆ ಪಕ್ಷಾಂತರ ಇದ್ದದ್ದೇ. ಅನೇಕರು ಹೋಗ್ತಾರೆ, ಅನೇಕರು ನಮ್ಮ ಜೊತೆ ಬರುತ್ತಾರೆ. ಏನೇ ಆದ್ರೂ 4 ರಾಜ್ಯದಲ್ಲೂ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ. ಜನ ಇವತ್ತು ಬಿಜೆಪಿ ಜೊತೆ, ಮೋದಿ ಜೊತೆ ಇದ್ದಾರೆ. ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಖಂಡಿತಾ ಪೂರ್ಣ ಬಹುಮತ ಪಡೆಯಲಿದೆ. ಬಹಳ ಜನ ಪ್ರಭಾವಿ ನಾಯಕರು ಹೋಗಿದ್ದಾರೆ. ಪ್ರಭಾವಿ ನಾಯಕರು ಬಂದಿದ್ದಾರೆ ಎಂದು ಹೇಳಿದರು.

Also read:  ಕಾಂಗ್ರೆಸ್ ಪಕ್ಷ ಕಳಂಕಿತರಿಗೆ ಟಿಕೇಟ್ ನೀಡಿದೆ: ಮೋದಿ

 

 

 

Latest article