Tuesday, November 29, 2022

ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಾಯಿಸಿ ಗಣಿ ಮಾಲೀಕರ ಪ್ರತಿಭಟನೆ

Must read

ಮಂಡ್ಯ: ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಅಪಾಯವಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಟ್ರಯಲ್​ ಬ್ಲಾಸ್ಟ್ ನಡೆಸಲು ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಇದೀಗ ಭಾರೀ ವಿರೋಧದ ನಡುವೆ ತಜ್ಞರ ತಂಡವನ್ನು ವಾಸಪ್​ ಕಳುಹಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಡಳಿತದ ಭರವಸೆ ಹಿನ್ನೆಲೆಯಲ್ಲಿ ಟ್ರಯಲ್​ ಬ್ಲಾಸ್ಟ್​​ ವಿರೋಧಿಸಿ ಕೆಆರ್​ಎಸ್​ ಡ್ಯಾಂ ಸಮೀಪದ ಕಟ್ಟೇರಿ ಬಳಿ ಹೋರಾಟ ನಡೆಸುತ್ತಿರುವ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಆದರೆ ಇತ್ತ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಗಣಿ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ನೀಡುವಂತೆ ಗಣಿ ಮಾಲೀಕರ ಆಗ್ರಹಿಸಿದ್ದು, ಟ್ರಯಲ್ ಬ್ಲಾಸ್ಟ್ ಬೇಕು ಎಂದು ಗಣಿ ಮಾಲೀಕರು. ಘೋಷಣೆ ಕೂಗಿದ್ದಾರೆ.

Latest article