ಬಲವಂತದ ಮತಾಂತರ ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಭಟನೆ ನಡೆಸಿದ್ದಾರೆ. ಹಿಂದೂ ಯುವಕ- ಯುವತಿಯರನ್ನು ಮುಸ್ಲಿಂ ಸಮುದಾಯಕ್ಕೆ ಬಲವಂತಾಗಿ ಮತಾಂತರ ಗೊಳಿಸಿತಿರುವ ಹಿನ್ನೆಲೆ ನಗರದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ವಿಧಾನ ಪರಿಷತ್ ಮತ್ತು ವಿಧಾನಸಭೆಗಳಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯು ಜಾರಿಮಾಡಿದೆ. ನಿಷೇಧ ಕಾಯ್ದೆ ಜಾರಿ ಮಾಡಿದ್ರೂ ಕೂಡಾ ಇಂತಹ ಮತಾಂತರ ಘಟನೆಗಳು ಮರುಕಳಿಸುತ್ತಿರುವುದು ಸರಿಯಲ್ಲ. ಮತಾಂಧರಿ ಮೌಲಾನಾಗಳ ಹಿಂದೆ ಯಾರ ಕುಮ್ಮಕ್ಕೂ, ಯಾವ ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ನಿಷ್ಪಕ್ಷಪಾತವಾಗಿ ಪತ್ತೆ ಹಚ್ಚಿ, ಸಮಾಜಘಾತುಕರಿಗೆ ತಕ ಶಿಕ್ಷೆ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿರುವ ಸಂಘಟನೆಗಳನ್ನು ಕಿತ್ತೊಗೆಯಬೇಕು.ದಲಿತ ಯುವತಿಯರನ್ನು ಮುಸ್ಲಿಂ ಸಂಘಟನೆಗಳು ಟಾರ್ಗೆಟ್ ಮಾಡಿ ದೌರ್ಜನ್ಯ ಮಾಡುತ್ತಿರುವ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.