ನಮ್ಮ ಮಂಗಳೂರಿನ ಹುಡುಗಿ ಸಿ.ಎ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲು!

ನಮ್ಮ ಮಂಗಳೂರಿನ ಹುಡುಗಿ ಸಿ.ಎ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲು!

ಮಂಗಳೂರು: ಮಂಗಳೂರಿನ ಹುಡುಗಿ ರುತ್ ಕ್ಲೇರ್ ಡಿ'ಸಿಲ್ವಾ ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿಎ) ಜುಲೈ 2021 ರ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ಶ್ರೇಣಿ ಗಳಿಸುವ ಮೂಲಕ ಸಾಧನೆ ಮಾಡಿದ್ದು ಸೋಮವಾರ ಸಂಜೆ ಪರೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ.

ರೂತ್ ರೋಸಿ ಮಾರಿಯಾ ಡಿ'ಸಿಲ್ವಾ ಮತ್ತು ರಫರ್ಟ್ ಡಿ'ಸಿಲ್ವಾ ದಂಪತಿಯ ಪುತ್ರಿಯಾಗಿದ್ದು ರುತ್ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಆಕೆಯ ಮಾರ್ಗದರ್ಶಕರಾಗಿದ್ದ ನಂದಗೋಪಾಲ್ ಹೇಳಿದ್ದಾರೆ.

ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಕಠಿಣ ಪರಿಶ್ರಮ ಮತ್ತು ತಾಳ್ಮೆಯೇ ಇದಕ್ಕೆ ಕಾರಣ ಎಂದು ರೂತ್ ಹೇಳಿದ್ದಾರೆ.

Related Stories

No stories found.
TV 5 Kannada
tv5kannada.com