Sunday, October 2, 2022

ಶಿವಮೊಗ್ಗ ಚಾಕು ಇರಿತ ಪ್ರಕರಣ​: ಪ್ರಮುಖ ಆರೋಪಿ ಮೇಲೆ ಪೊಲೀಸ್​ ಫೈರಿಂಗ್​

Must read

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಫೋಟೋ ವಿವಾದದ ವೇಳೆ ಯುವಕನಿಗೆ ಚಾಕು ಇರಿದ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸಾವರ್ಕರ್​ ಫೋಟೋ ವಿವಾದದ ಗಲಭೆ ವೇಳೆ ಆರೋಪಿ ಮಾರ್ನಾಮಿಬೈಲ್ ನ ಜಬೀವುಲ್ಲಾ ಗಾಂಧಿ ಬಜಾರ್​ನಲ್ಲಿ ಪ್ರೇಮ್ ಸಿಂಗ್​ ಎಂಬಾತನಿಗೆ ಚಾಕು ಇರಿದು ಪರಾರಿಯಾಗಿದ್ದ.

ಕೂಡಲೇ ತನಿಖೆಗಿಳಿದ ಪೊಲೀಸರು ಆರೋಪಿಯ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದು, ತೀರ್ಥಹಳ್ಳಿ ರಸ್ತೆಯ ನಮೋ ಶಂಕರ ಲೇಔಟ್ ಬಳಿ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಶಿವಮೊಗ್ಗ ವಿನೋಬನಗರ ಠಾಣೆಯ ಸಬ್​ ಇನ್ಸ್​​ಪೆಕ್ಟರ್​ ಮಂಜುನಾಥ್ ಕುರಿ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸರು, ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಎಂಬಾತನನ್ನು ಬಂಧಿಸಿದ್ದಾರೆ.

Latest article