Tuesday, August 16, 2022

ಕನ್ನಡದ ನಟ ಚಂದನ್​​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಕಪಾಳಮೋಕ್ಷ

Must read

ಕನ್ನಡ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಧಾರವಾಹಿ ಶೂಟಿಂಗ್ ಸೆಟ್​​ನಲ್ಲಿ ಚಂದನ್​ ಕುಮಾರ್​ ಮೇಲೆ ತಂತ್ರಜ್ಞರು ಹಲ್ಲೆ ಮಾಡಿದ ವಿಡಿಯೋ ವೈರಲ್​ ಆಗಿದೆ.

ತೆಲುಗು ಸೀರಿಯಲ್ ಸಾವಿತ್ರಮ್ಮಗಾರು ಅಬ್ಬಾಯಿ ಸೆಟ್​ನಲ್ಲಿ ನಟ ಚಂದನ್​ಗೆ ತಂತ್ರಜ್ಞರು ಕಪಾಳಮೋಕ್ಷ ಮಾಡಿದ್ದಾರೆ. ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಈಗಾಗಲೇ ಜನಮನ ಸೆಳೆದಿದ್ದು, ಚಂದನ್ ಲೀಡ್ ರೋರ್ಳರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ವೇಳೆ ಚಂದನ್ ಕ್ಯಾಮರಾ ಅಸಿಸ್ಟೆಂಟ್​​ಗೆ ಮೊದಲು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಧಾರವಾಹಿ ತಂತ್ರಜ್ಞರ ಜೊತೆ ಮಾತಿಗೆ ಮಾತು ಬೆಳೆದು ಕನ್ನಡ ನಟ ಚಂದನ್​ಗೆ ಕಪಾಳಕ್ಕೆ ಬಾರಿಸಿದ್ದಾರೆ. ಇನ್ನು ಈ ಗಲಾಟೆ ಕೆಲವು ದಿನಗಳ ಹಿಂದೆಯೇ ಆಗಿದ್ದು, ಚಂದನ್​ಗೆ ಹೊಡೆದಿರುವ ವಿಡಿಯೋ ಈಗ ವೈರಲ್ ಆಗ್ತಿದೆ. ಚಂದನ್ ಈ ಹಿಂದೆ ಲಕ್ಷ್ಮೀ ಬಾರಮ್ಮ,’ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’, ‘ಸರ್ವ ಮಂಗಳ ಮಾಂಗಲ್ಯೇ’  ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಧಾರವಾಹಿ ಅಲ್ಲದೆ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ನಟಿಸುತ್ತಿದ್ದಾರೆ.

 

Latest article