Tuesday, November 29, 2022

ಮುಂದಿನ ಚುನಾವಣೆಗೆ ‘ದಳಪತಿ’ಗಳ ಮಾಸ್ಟರ್​ ಪ್ಲಾನ್..!

Must read

‘ದಳಪತಿ’ಗಳು ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್​ ಯುವ ಪಡೆಯಿಂದ ಚುನಾವಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ರಾಜ್ಯ ಪ್ರವಾಸಕ್ಕೆ ಮಾಸ್ಟರ್​​ ಪ್ಲಾನ್ ರೆಡಿಯಾಗಿದೆ. ಈ ಸಂಬಂಧ ಅಕ್ಟೋಬರ್​ನಿಂದ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯುವ ನಾಯಕರಿಗೆ ಮಣೆ ಹಾಕಲು ಹಿರಿಯ ನಾಯಕರಿಗೆ ನಿಖಿಲ್​ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಇನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ನಿಖಿಲ್​ ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ತಯಾರಿ ನಡೆಸುತ್ತಿದ್ದಾರೆ. ಜೊತೆಗೆ ಯುವ ನಾಯಕರಿಗೆ ಮಣೆ ಹಾಕಲು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಗೆ ನಿಖಿಲ್​ ಮನವಿ ಮಾಡಿದ್ದು, ಕನಿಷ್ಟವೆಂದರೂ 30 ರಿಂದ 40 ಯುವ ಅಭ್ಯರ್ಥಿಗಳಿಗೆ ಟಿಕೆಟ್​ ನೀಡುವಂತೆ ಒತ್ತಾಯಿಸಿದ್ದಾರೆ.
ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿಖಿಲ್​ ಕುಮಾರಸ್ವಾಮಿ ಚಿಂತಿಸಿದ್ದಾರೆ, ಇದು ಭವಿಷ್ಯದ ನಾಯಕತ್ವಕ್ಕೆ ಮುನ್ನುಡಿ ಬರೆಯಲು ಸುಲಭವಾಗಲಿದೆ. ಜೊತೆಗೆ ಹಳೇ ಮೈಸೂರು ಭಾಗ ಸೇರಿದಂತೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಕೆಲವೆಡೆ ಯುವಕರಿಗೆ ಆದ್ಯತೆ ನೀಡಲು ಚಿಂತನೆ ಮಾಡಿದ್ದಾರೆ. ಯುವಕರಿಗೆ ಟಿಕೆಟ್ ಕೊಡಿಸಿದ್ದಲ್ಲಿ ನಿಖಿಲ್​ ರಾಜಕೀಯ ಭವಿಷ್ಯಕ್ಕೆ ಪ್ಲಸ್​​ ಪಾಯಿಂಟ್​ ಆಗಲಿದೆ. ಹೀಗಾಗಿ ಜನಪ್ರಿಯತೆ ಪಡೆದಿರುವ ಯುವ ನಾಯಕರೊಂದಿಗೆ ನಿಖಿಲ್ ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ.

Latest article