ಉಡುಪಿ: ಜಿಲ್ಲೆಯ ಕಾಪು ಸಮುದ್ರದಲ್ಲಿ ಶುಕ್ರವಾರ ಮೀನುಗಾರರ ಬಲೆಗೆ ರಾಶಿ-ರಾಶಿ ಭೂತಾಯಿ ಮೀನುಗಳು ಬಿದ್ದಿವೆ.
ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ ಟನ್ಗಟ್ಟಲೇ ಭೂತಾಯಿ ಮೀನುಗಳು ಬಿದ್ದಿವೆ. 30 ಟನ್ಗೂ ಅಧಿಕ ಮೀನುಗಳು ಬಲೆಗೆ ಬಿದ್ದಿದ್ದು, ಅಂದಾಜು 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮೀನು ಮಾರಾಟವಾಗಿವೆ.
ಅಸಾನಿ ಚಂಡ ಮಾರುತದಿಂದ ಕಡಲು ಪ್ರಕ್ಷ್ಯುಬ್ದಗೊಂಡಿರುವ ಕಾರಣ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಹೇರಳವಾಗಿ ಭೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ.