Thursday, October 6, 2022

ಕೆಜಿಎಫ್​-2 ಚಿತ್ರ ವೀಕ್ಷಣೆ ವೇಳೆ ಫೈರಿಂಗ್​: ಯುವಕನನ್ನ ತಬ್ಬಿ ಗುಂಡು ಹಾರಿಸಿದ ಅಪರಿಚಿತ

Must read

ಹುಬ್ಬಳ್ಳಿ: ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಅಪರಿಚಿತ ವ್ಯಕ್ತಿ ಯುವಕರ ಮೇಲೆ ಗುಂಡು ಹಾರಿಸಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

ಶಿಗ್ಗಾಂವಿಯ ರಾಜಶ್ರೀ ಟಾಕೀಸ್​ನಲ್ಲಿ ಕೆಜಿಎಫ್-2 ಚಿತ್ರ ಪ್ರದರ್ಶನ ನಡೆಯುತಿತ್ತು. ಸಿನಿಮಾ ಆರಂಭವಾಗಿ 5 ನಿಮಿಷಕ್ಕೆ ಅಪರಿಚಿತ ವ್ಯಕ್ತಿ ಹಾಗೂ ಗಾಯಾಳು ನಡುವೆ ಕಾಲು ತಾಕಿದ ವಿಚಾರಕ್ಕೆ ಗಲಾಟೆ ಆರಂಭವಾಗಿದೆ.
ಜಗಳದ ವೇಳೆ ವಾಪಸ್​ ಬಂದು ನೋಡಿಕೊಳ್ಳುತ್ತೇನೆ ಎಂದು ಚಿತ್ರಮಂದಿರದಿಂದ ಹೊರ ಹೋದ ಆರೋಪಿ,  ಹತ್ತು ನಿಮಿಷದಲ್ಲಿ ಗನ್​ ಸಮೇತ ವಾಪಸ್​ ಆಗಿದ್ದಾನೆ. ಮತ್ತೆ ಮಾತಿಗಿಳಿದಿದ್ದ ಆರೋಪಿ ಗನ್ ತೋರಿಸುತ್ತಲೇ ಯುವಕನ್ನು ತಬ್ಬಿಕೊಂಡು ಶೂಟ್ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಪತ್ತೆಗೆ ಎರಡು ವಿಶೇಷ ತಂಡ ರಚನೆಯಾಗಿದ್ದು, ಬೆಂಗಳೂರಿನಿಂದ ಬರುವ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪರಿಶೀಲನಾ ತಂಡ ತನಿಖೆ ನಡೆಸಲಿದ್ದಾರೆ ಎಂದು ಎಸ್​ಪಿ ಹನುಮಂತರಾಯ್ ಹೇಳಿದ್ದಾರೆ.

ಸದ್ಯ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ವಸಂತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Latest article