'ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಶ್ರೀಗಳು ನಡೆದಾಡುವ ದೇವರು' - ಸಿಎಂ

ನಾನು ಮಾತಾಡಲು ಬಂದಾಗಲೆಲ್ಲಾ ಸಲಹೆ ಕೊಟ್ಟು ಪ್ರಸಾದ ಮಾಡಿಯೇ ಹೋಗಬೇಕು ಎಂದು ಪ್ರಸಾದ ಕೊಟ್ಟೇ ಕಳಿಸುತ್ತಿದ್ದರು.
'ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಶ್ರೀಗಳು ನಡೆದಾಡುವ ದೇವರು' - ಸಿಎಂ

ತುಮಕೂರು: 111 ವರ್ಷಗಳ ಕಾಲ ನಡೆದಾಡುವ ದೇವರೆಂದೇ ನಾವು ಅವರನ್ನು ಭಾವಿಸಿದ್ದೆವು. ಅವರ ಆಶೀರ್ವಾದಿಂದ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರೆಯುತ್ತಿದ್ದೆವು. ನಾನು ಮಾತಾಡಲು ಬಂದಾಗಲೆಲ್ಲಾ ಸಲಹೆ ಕೊಟ್ಟು ಪ್ರಸಾದ ಮಾಡಿಯೇ ಹೋಗಬೇಕು ಎಂದು ಪ್ರಸಾದ ಕೊಟ್ಟೇ ಕಳಿಸುತ್ತಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದರು.

ಇಂದು ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಅವರು ನಡೆದಾಡುವ ದೇವರಾಗಿದ್ದರು. ಬಸವಣ್ಣನವರ ಕಾಯಕ ತತ್ವದಲ್ಲಿ ಶ್ರೀಗಳು ತೊಡಗಿಸಿಕೊಂಡಿದ್ದರು. ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬಂತೆ ಬಾಳಿದರು. ಇಡೀ ಜೀವನ ಸವೆಸಿದರು. ಜಾತಿ ಬೇಧವಿಲ್ಲದೇ ಮಠದಲ್ಲಿ ಸರ್ವ ಧರ್ಮಿಯರಿಗೂ ಆಶ್ರಯ ನೀಡಿದರು. ಇಲ್ಲಿ ಶಿಕ್ಷಣ ಪಡೆದವರು ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ ಎಂದು ತಿಳಿಸಿದರು.

ಜೀವನದಲ್ಲಿ ನೀನೊಬ್ಬನೇ ಏನಾದರೂ ಸಾಧಿಸಿ ಮೇಲೆ ಬರೋದಕ್ಕಿಂದ ಹತ್ತು ಜನರನ್ನು ಮೇಲೆತ್ತು ಎಂದು ಶ್ರೀಗಳ ಮಾತಾಗಿತ್ತು. ಮಕ್ಕಳಿಗೆ ಅನ್ನದ ಜೊತೆ ಅಕ್ಷರ ಜ್ಞಾನ ನೀಡಿದರು. ಎಲ್ಲರೂ ನನ್ನವರೆಂಬ ಭಾವದ ವಿಶ್ವ ಸಂದೇಶ ಸಾಧಿಸಿದರು. ಭೌತಿಕವಾಗಿ ಅವರು ದೂರವಾಗಿದ್ದರೂ ತ್ರಿವಿಧ ದಾಸೋಹದ ಮೂಲಕ ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ನುಡಿದರು.

ಈ ಮೊದಲ ಮಾತನಾಡಿದ ಸಿದ್ದಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ಎರಡು ವರ್ಷದಿಂದ ಅವರ ಸ್ಮರಣೆ ನಮಗೆ ದರ್ಶನಾಹಾರವಾಗಿದೆ. ಅವರನ್ನು ಗುರುಗಳನ್ನಾಗಿ ಪಡೆದಿದ್ದಕ್ಕೆ ಈ ನಾಡು ಧನ್ಯತೆ ಪಡೆದುಕೊಂಡಿದೆ ಎಂದರು.

ಇನ್ನು ಲಕ್ಷಾಂತರ ಮಕ್ಕಳ ಜೀವನಕ್ಕೆ ಬೆಳಕು ನಮ್ಮ ಗುರುಗಳು, ನಿರಂತರವಾಗಿ 89 ವರ್ಷ ಒಂದೇ ಪೀಠದಲ್ಲಿ ಮಠವನ್ನು ನಿಭಾಯಿಸಿದರು. ಅವರ ಬದುಕು ಶಿವಯೋಗ, ದಾಸೋಹ, ತ್ಯಾಗಕ್ಕೆ ಮೀಸಲಿಟ್ಟು ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡರು ಎಂದಿದ್ದಾರೆ.

ಆತ್ಮ ನಿರ್ಭರ ಭಾರತ 12ನೇ ಶತಮಾನದಲ್ಲಿಯೇ ಬಸವಣ್ಣ ತಿಳಿಸಿದ್ದರು. ಅವರ ಕಾಯ, ಕಾಯಕ ಎರಡೂ ಕೈಲಾಸವಾಗಿತ್ತು. ನಾಡಿನ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಹಳ್ಳಿ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಕನಸು ಕಂಡಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಿದರು. ಪರಮ ಪೂಜ್ಯರು ಹಳ್ಳಿ ಮಕ್ಕಳಿಗೆ ಆಶ್ರಯ ನೀಡಬೇಕೆಂಬುದು ಅವರ ಆಶಯ ಆಗಿತ್ತು. ಮಠದಲ್ಲಿ ಮಕ್ಕಳಿಗೆ ಆಶ್ರಯ ನೀಡಿದರು. ಕೊಠಡಿಗಳ ಸಂಖ್ಯೆ ಕಡಿಮೆ ಆದಾಗ ತಮ್ಮ ಕೋಣೆಯನ್ನೇ ಮಕ್ಕಳಿಗೆ ಬಿಟ್ಟು ಕೊಟ್ಟರು ಎಂದು ಶ್ರೀಗಳ ಕಾರ್ಯ ವೈಖರಿಯನ್ನು ನೆನೆದರು.

Related Stories

No stories found.
TV 5 Kannada
tv5kannada.com