Tuesday, August 16, 2022

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಈಶ್ವರಪ್ಪ ಆಗ್ರಹ

Must read

ಶಿವಮೊಗ್ಗ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಶಿವಮೊಗ್ಗ ನಗರ ಬಿಜೆಪಿಯಿಂದ ವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಈ ಸಭೆಯಲ್ಲಿ ಮಾತನಾಡಲು ನೋವಾಗುತ್ತೆ. ಸ್ವತಂತ್ರ ಭಾರತದಲ್ಲಿ ಇಂತಹ ಸಭೆ ನಡೆಯಬೇಕಾ ಎನ್ನುವುದು ದೇಶ ಭಕ್ತರ ಪ್ರಶ್ನೆ. ಪ್ರಧಾನಿ ಮೋದಿಯವರಿಗೆ ನಾನು ಮನವಿ ಮಾಡ್ತೇನೆ. ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೂಪದಲ್ಲಿ ಕೊಲೆ ಮಾಡಲಾಗುತ್ತಿದೆ. ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು. ಸಂವಿಧಾನಬದ್ಧವಾಗಿ ಗಲ್ಲುಶಿಕ್ಷೆ ಅಥವಾ ಗುಂಡಿಟ್ಟು ಕೊಲ್ಲುವ ಶಿಕ್ಷೆ ನೀಡಬೇಕು. ಕೊಲೆ ಮಾಡಿದ್ದನ್ನು ಅವರೇ ವಿಡಿಯೋ ಮೂಲಕ ಒಪ್ಪಿಕೊಂಡಿದ್ದಾರೆ.

ಒಬ್ಬನೇ ಇದ್ದಾಗ ಹೋಗಿ ದೊಡ್ಡ ಗಂಡಸರ ರೀತಿ ಕೊಲೆ ಮಾಡಿ ಹೋಗಿದ್ದಾರೆ. ಕೊಲೆ ಮಾಡಿದ್ದೇವೆ ಎಂದು ಅವರೇ ಒಪ್ಪಿಕೊಂಡ ಮೇಲೆ ಕೋರ್ಟ್​ಗೆ ಕರೆಸಿ ಕೇಳೋದಾದ್ರೂ ಏನು..? ಎರಡು ಬಾರಿ ಕರೆಸಿದರೂ ಅವರು ಅದನ್ನೇ ಹೇಳುತ್ತಾರೆ. ಅವರೇ ಒಪ್ಪಿಕೊಂಡ ಮೇಲೆ ಗುಂಡಿಟ್ಟು ಕೊಲ್ಲುವುದರಲ್ಲಿ ಏನು ತಪ್ಪಿದೆ. ಒಬ್ಬ ಹಿಂದೂ ಕಾರ್ಯಕರ್ತನನ್ನು ಇಬ್ಬರು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದ್ದಾರೆ. ಜೊತೆಗೆ ಅದೇ ಚಾಕು ತೋರಿಸಿ, ವಿಶ್ವನಾಯಕ ಮೋದಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡಲೇ ಸಭೆ ಸೇರಿ ನಿರ್ಣಯ ಕೈಗೊಳ್ಳಬೇಕು. ಪ್ರಪಂಚದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Latest article