Tuesday, August 16, 2022

ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಕೊಟ್ಟಿಗೆ: ಹಸುಗಳ ಜೀವಂತ ದಹನ

Must read

ತುಮಕೂರು: ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಸುಗಳು ಜೀವಂತ ದಹನವಾಗಿರುವ ಘಟನೆ ತುಮಕೂರಿನ ತಿಪಟೂರು ತಾಲೂಕಿನ ರುದ್ರಾಪುರ‌ದಲ್ಲಿ ನಡೆದಿದೆ.

ರುದ್ರಾಪುರ ಗ್ರಾಮದ ಗವಿರಂಗಣ್ಣ ಎಂಬುವವರ ಮನೆಯ ಕೊಟ್ಟಿಗೆಗೆ ನಿನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ನೋಡನೋಡುತ್ತಿದಂತೆ ಸಂಪೂರ್ಣ ಕೊಟ್ಟಿಗೆ ಹೊತ್ತಿ ಉರಿದಿದೆ.

ಘಟನೆಯಲ್ಲಿ ಎರಡು ಹಸುಗಳು ಹಾಗೂ ಐದು ಮೇಕೆಗಳು ಸುಟ್ಟು ಕರಕಲಾಗಿದೆ. ಜೀವನಾಧಾರವಾಗಿದ್ದ ರಾಸುಗಳನ್ನು ಕಳೆದುಕೊಂಡು ರೈತ ಕಂಗಲಾಗಿದ್ದಾರೆ.

ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest article