Monday, March 27, 2023

ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಭೆಯಲ್ಲಿ ಸುಮಲತಾ ವಿರುದ್ಧ ರೈತ ಲೇವಡಿ

Must read

ಬೆಂಗಳೂರು: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ರೈತ ಮುಖಂಡ ಯಶವಂತ್ ಲೇವಡಿ ಮಾಡಿದ್ದು,ನಮ್ಮ ಸಂಸದರು ಮೊದಲ ಬಾರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸರ್ಕಾರಿ ಸ್ವಾಮಿತ್ವದಲ್ಲೇ ಆಗಬೇಕೆಂದಿದ್ದಾರೆಇದಕ್ಕೆ ನಾನು ಅವರನ್ನ ಅಭಿನಂದಿಸುತ್ತೇನೆ ಎಂದು ವ್ಯಂಗ್ಯ ಮಾಡಿದ್ದಾರೆ.

ರೈತ ಯಶವಂತ್ ಮಾತಿಗೆ ಸಂಸದೆ ಸುಮಲತಾ ತಕ್ಷಣವೇ ಟಾಂಗ್​ ನೀಡಿದ್ದು, ನನ್ನ ಮಾತುಗಳನ್ನ ತಿರುಚಿ‌ ‌ಹೇಳುವುದು ಬೇಡ. ರೈತರಿಗೆ ಒಳ್ಳೆಯದಾಗಬೇಕಷ್ಟೇ. ನನ್ನ ವಿರುದ್ಧ ಇಲ್ಲಿ ಈ ಕಾಮೆಂಟ್ ನಿರೀಕ್ಷಿಸಿರಲಿಲ್ಲ. ಇಲ್ಲಿ ಅದಕ್ಕೆ ನಾನು ಉತ್ತರವನ್ನು ಸಹ ಕೊಡುವುದಿಲ್ಲ. ಚರ್ಚೆಗೆ ಬೇರೆಯದೇ ಸ್ಥಳಗಳಿವೆ. ನಾನು ಯಾವತ್ತೂ ಖಾಸಗಿಯವರಿಗೆ ಕೊಡಿ ಎಂದಿಲ್ಲ. ಯಾವುದಾದರೂ ಸರಿ ರೈತರಿಗೆ ಒಳ್ಳೆಯದಾಗಬೇಕಷ್ಟೇಇದನ್ನಷ್ಟೇ ನಾನು ಹೇಳಿದ್ದು ಎಂದರು.

Latest article