ಟರ್ಕಿ ಸಿರಿಯಾ ಜನತೆಯ ಸಂಕಷ್ಟಕ್ಕೆ ಮಿಡಿದ ಯುಎಇಯ ಕನ್ನಡ ಹೃದಯಗಳು.
ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಸಹಾಯ ಹಸ್ತ ವಿಭಾಗದ ಸದಸ್ಯರು ಟರ್ಕಿ ಮತ್ತು ಸಿರಿಯಾ ದೇಶಗಳ ಭೂಕಂಪ ಪೀಡಿತ ನಿರಾಶ್ರಿತರಿಗೆ ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಜನರಿಂದ ಶೇಖರಣೆ ಮಾಡಿದ ಆಹಾರ ಪದಾರ್ಥ ಮತ್ತು ಉಡುಗೆ ಬಟ್ಟೆ ಹಾಗೂ ಹೊದಿಕೆಗಳನ್ನು 26.02.2023ರಂದು ದುಬೈಯ ಎಮಿರೇಟ್ಸ್ ರೆಡ್ ಕ್ರೆಸೆಂಟ್ ಸಂಸ್ಥೆ ಮೂಲಕ ಕಳುಹಿಸಿಕೊಡಲಾಯಿತು, ಎಮಿರೇಟಿನ ವಿವಿಧ ಭಾಗಗಳಲ್ಲಿ ಸಂಘದ ಸದಸ್ಯರು ದಾನಿಗಳಿಂದ ಸಹಾಯ ಕಾಣಿಕೆ ವಸ್ತುಗಳನ್ನು ಶೇಖರಿಸಿ ದುಬೈಯ ರೆಡ್ ಕ್ರೆಸೆಂಟ್ ಸಂಸ್ಥೆಯ ಮುಖ್ಯ ಕಛೇರಿಯಿಂದ ಭೂಕಂಪ ಪೀಡಿತ ಜನರಿಗೆ ಕಳುಹಿಸಕೊಡಲಾಯಿತು.
ಶೇಖರಿಸಿದ ವಸ್ತುಗಳನ್ನು ಸಂಸ್ಥೆಯವರಿಗೆ ಹಸ್ತಾಂತರಿಸುವ ವೇಳೆಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಮಧು ದಾವಣಗೆ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು,ಸಮಿತಿ ಸದಸ್ಯರುಗಳಾದ ವರದರಾಜ್ ಕೋಲಾರ, ಮೊಹಿಯುದ್ದೀನ್ ಹುಬ್ಬಳ್ಳಿ, ಶಂಕರ್ ಬೆಳಗಾವಿ, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ ಮತ್ತು ವಸ್ತುಗಳನ್ನು ಶೇಖರಣೆ ಮಾಡಿ ತಲುಪಿಸಲು ಸಹಾಯ ಮಾಡಿದ ಸೋಮಶೇಖರ್ ರೆಡ್ಡಿ ಅಬುಧಾಬಿ ಹಾಗೂ ಉಮರ್ ಫಾರೂಕ್ ಮಂಗಳೂರು ಉಪಸ್ಥಿತರಿದ್ದರು.
ವಿಷ್ಣು ಮೂರ್ತಿ ಅವರು ಸಹಾಯ ಮಾಡಿದ ಎಲ್ಲಾ ದಾನಿಗಳಿಗೆ ದನ್ಯವಾದಗಳನ್ನು ತಿಳಿಸಿ ಸಂಕಷ್ಟದಲ್ಲಿರುವ ಟರ್ಕಿ ಸಿರಿಯಾ ದೇಶದ ಜನತೆಯ ಕಷ್ಟದ ಸಮಯಗಲ್ಲಿ ತಾವು ಬಾಗಿಯಾಗಿದ್ದು ಶೀಘ್ರದಲ್ಲಿ ಜನತೆ ಸಂಕಷ್ಟದಿಂದ ಹೊರ ಬರಲಿ ಎಂದು ಪ್ರಾರ್ಥಿಸಿದರು.