Sunday, October 2, 2022

ರಾಜ್ಯ ರಾಜಕೀಯದಲ್ಲಿ QR ‘ಕೋಡ್​’ ವಾರ್​..!

Must read

ಬೆಂಗಳೂರಿನೆಲ್ಲೆಡೆ ಗೋಡೆಗಳ ಮೇಲೆ ‘PAYCM’ ಪೋಸ್ಟರ್ ಅಂಟಿಸಿದ ವಿಚಾರದ ಬಗ್ಗೆ ಕಾಂಗ್ರೆಸ್​ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್​ನವರೇ ಪೇಸಿಎಂ ಪೋಸ್ಟರ್​ ಅಂಟಿಸಿದ್ದಾರೆಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಪೇಸಿಎಂ ಪೋಸ್ಟರ್​ ಅಭಿಯಾನ ಕಾಪಿ ಹೊಡೆದ ಬಿಜೆಪಿ ಭ್ರಷ್ಟ ಜೋಡಿಗಳು ಎಂದು ಅಭಿಯಾನ ಶುರು ಮಾಡಿದೆ.
ಬಿಜೆಪಿ ತಯಾರಿಸಿರುವ ಕ್ಯೂಆರ್​ ಕೋಡ್​ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​​ ಫೋಟೋವನ್ನ ಅಳವಡಿಸಲಾಗಿದೆ. ರಾಜ್ಯವನ್ನು ಲೂಟಿ ಮಾಡಿ ಹಾಳು ಮಾಡಿರುವ ಭ್ರಷ್ಟ ಜೋಡಿ ಇದು. ಇವರನ್ನ ರಾಜ್ಯದಿಂದ ಕಿತ್ತೆಸೆಯಲು ಸ್ಕ್ಯಾನ್​ ಮಾಡಿ. ರಾಜ್ಯವನ್ನು ಹಾಳು ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದು, ಅಶಾಂತಿ ಸೃಷ್ಟಿಸುವ ಬಗ್ಗೆ ಭ್ರಷ್ಟ ಜೋಡಿಗಳು ಚರ್ಚೆಯಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಡಿಕೆಶಿ, ಸಿದ್ದು ಫೋಟೋ ಅಂಟಿಸಿ ಕಿಡಿ ಕಾರಿದ್ದಾರೆ.
ಅಷ್ಟಲ್ಲದೇ, ಕಾಂಗ್ರೆಸ್ ಪೇ ಸಿಎಂ ಪೋಸ್ಟರ್​ಗೆ ಬಿಜೆಪಿ ಕಂಗಾಲಾಗಿದ್ದು, ಸರಣಿ ಪೋಸ್ಟರ್ ರಿಲೀಸ್ ಮಾಡುತ್ತಿದೆ. ಇದೀಗ ಸಿದ್ದು, ಡಿಕೆಶಿ ಮುಂದಿಟ್ಟುಕೊಂಡು ಪೋಸ್ಟರ್​ಅನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯವನ್ನು ಲೂಟಿ ಮಾಡಿ ಹಾಳು ಮಾಡಿರುವ ಭ್ರಷ್ಟ ಜೋಡಿ, ಅಶಾಂತಿ ಸೃಷ್ಟಿಸುವ ಬಗ್ಗೆ ಭ್ರಷ್ಟ ಜೋಡಿಗಳು ಚರ್ಚೆಯಲ್ಲಿದ್ದಾರೆ. ಬರ್ನಾಲ್ ಬ್ರದರ್ಸ್, ಮಾತ್ರೆಗಳೆಂಬ ಪೋಸ್ಟರ್ ರಿಲೀಸ್​ ಮಾಡಿ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿಕಾರಿದೆ.

Latest article