ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವೇಳೆಯೇ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಸರ್ಕಾರದ ನಿಯಮ ಮೀರದೆ ಪಾದಯಾತ್ರೆ ಸುಗಮವಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿತಂತ್ರ ರೂಪಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಹೋಗುವ ಮಾರ್ಗದ ಹೋಟೆಲ್, ಲಾಡ್ಜ್, ರೆಸಾರ್ಟ್ಗಳು ಬಂದ್ ಆಗಲಿದೆ. ಹೀಗಾಗಿ ಪಾದಯಾತ್ರಿಗಳು ತಂಗಲು ಹೊಲ ಹಾಗೂ ಗದ್ದೆಗಳಲ್ಲೇ ಟೆಂಟ್ಗಳನ್ನು ಹಾಕಲು ಡಿ.ಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಸಾವಿರ ಬೆಡ್ಗಳನ್ನು ಕೂಡ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ವಾಸ್ತವ್ಯಕ್ಕೆಂದು ಬುಕ್ ಮಾಡಿದ್ದ ರೂಂಗಳನ್ನು ಕಾಂಗ್ರೆಸ್ ನಾಯಕರು ರದ್ದು ಮಾಡಿದ್ದು, ಕೋವಿಡ್ ನಿಯಮದಂತೆ ಸಂಪೂರ್ಣ ಪಾದಯಾತ್ರೆಯ ಪೂರ್ವ ತಯಾರಿ ನಡೆದಿದೆ ಎನ್ನಲಾಗಿದೆ.