ಪ್ರಹ್ಲಾದ್ ಜೋಷಿ ಮಗಳ ಮದುವೆಯಲ್ಲಿ ಬಾರದ ಕೊರೊನಾ ದಸರಾಗೆ ಅಡ್ಡಿ..!

ಪ್ರಹ್ಲಾದ್ ಜೋಷಿ ಮಗಳ ಮದುವೆಯಲ್ಲಿ ಬಾರದ ಕೊರೊನಾ ದಸರಾಗೆ ಅಡ್ಡಿ..!
Dasara Celebration Jambu Savari

ನಾಡಹಬ್ಬ ದಸರಾ ಆಚರಣೆಯ ಸಂಭ್ರಮವನ್ನ ಕಣ್ತುಂಬಿಕೊಳ್ಳೋಕೆ ಜನ ಕಾತುರದಿಂದ ಕಾದು ಕುಳಿತಿದ್ರು..ಆದ್ರೆ ಕೋವಿಡ್ ನಿಂದಾಗಿ ಈ ಭಾರಿಯೂ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ..ಕಳೆದ ಭಾರಿಯಂತೆ ಈ ಭಾರಿಯೂ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ..ಸಿಎಂ ನೇತೃತ್ವದಲ್ಲಿಂದು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ..

ಮೈಸೂರು ದಸರಾ.. ಎಷ್ಟೊಂದು ಸುಂದರ.. ಹೌದು.. ಕರ್ನಾಟಕದ ನಾಡಹಬ್ಬ.. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಪ್ರತಿವರ್ಷವೂ ವಿಜೃಂಬಣೆಯಿಂದ ಆಚರಿಸಲಾಗ್ತಿತ್ತು.. ಆದ್ರೆ ಕಳೆದೊಂದು ವರ್ಷದಿಂದ ದಸರಾ ಸಂಭ್ರಮಕ್ಕೆ ಕೊರೊನಾ ಕರಿಛಾಯೆ ಆವರಿಸಿದೆ. ಇದೀಗ ಈ ವರ್ಷವೂ ಕೂಡ, ನಾಡಹಬ್ಬ ದಸರಾದ ಅದ್ಧೂರಿ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲಾಕಿದೆ. 3ನೇ ಅಲೆ ಭೀತಿಯಿಂದಾಗಿ ಈ ವರ್ಷವೂ ಸರಳ ದಸರಾವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ..

2021ರ ನಾಡಹಬ್ಬ ದಸರಾ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಬೇಕಾ.. ಸರಳವಾಗಿ ಆಚರಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸಲು ಉನ್ನತಮಟ್ಟದ ಸಮಿತಿ ಸಭೆ ಕರೆಲಾಗಿತ್ತು. ಸಂಜೆ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನೇತತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ತಜ್ಞರ ಸಮಿತಿ, ಮೈಸೂರು ಉಸ್ತುವಾರಿ ಸಚಿವರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಕ್ಟೋಬರ್‌ನಲ್ಲಿ 3ನೇ ಅಲೆ ಆತಂಕ ಇರೋದ್ರಿಂದ, ಈ ವರ್ಷವೂ ಸರಳ ದಸರ ಆಚರಿಸಲು ತಜ್ಞರು ಸಲಹೆ ನೀಡಿದ್ದರು. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ, ಸಿಎಂ ಬೊಮ್ಮಾಯಿ ಅಂತಿಮವಾಗಿ, ಕಳೆದ ವರ್ಷದಂತೆ ಸರಳ ದಸರಾ ಆಚರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡ್ರು. ಹಾಗಾದ್ರೆ ಸಭೆಯಲ್ಲಿ ಏನೆಲ್ಲ ನಿರ್ಧಾರ ಕೈಗೊಳ್ಳಲಾಯ್ತು ಅನ್ನೋದನ್ನ ನೋಡೋದಾದ್ರೆ...

ಅಕ್ಟೋಬರ್ 7 ರಿಂದ 15 ರವರೆಗೆ ದಸರಾ ಕಾರ್ಯಕ್ರಮ ನಡೆಯಲಿದೆ.. ಅ.7ರಂದು ಬೆಳಗ್ಗೆ 8.15ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅ.15ರಂದು ಅರಮನೆ ಮೈದಾನದಲ್ಲೇ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಸರಳ, ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ..)

ಇನ್ನು ಈ ಬಾರಿ ಸಾಂಸ್ಕೃತಿ ಕಾರ್ಯಕ್ರಮಗಳು ಸರಳವಾಗಿರಲಿದ್ದು, ಕೇವಲ 50 ಮಂದಿ ಮಾತ್ರ ಭಾಗವಹಿಸಲು ಸಮ್ಮತಿ ನೀಡಲಾಗಿದೆ. ಅದೇ ರೀತಿ ಜಂಬೂ ಸವಾರಿಗೆ 300 ಮಂದಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಇನ್ನು 9 ದಿನಗಳ ಕಾಲ ನಡೆಯಲಿರುವ ಸರಳ ದಸರಾ ಕಾರ್ಯಕ್ರಮಕ್ಕೆ ದೀಪಾಲಂಕಾರದ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ದಸರಾ ಖರ್ಚು ವೆಚ್ಚಗಳಿಗೆ ಸರ್ಕಾರ ಈ ವರ್ಷ 6 ಕೋಟಿ ಹಣ ನೀಡಿದೆ.

ಇನ್ನು ದಸರಾ ವೇಳೆ ಮೈಸೂರಿನ ಜನಪ್ರತಿನಿಧಿಗಳು ಟೂರಿಸಂಗೆ ಬೆಂಬಲ ಕೇಳಿದ್ದಾರೆ. ಟೂರಿಸಂ ಸರ್ಕ್ಯೂಟ್ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸದ್ಯ ಇರುವ ಟೂರಿಸಂ ಪಾಲಿಸಿ ಮುಂದುವರಿಯಲಿದೆ ಎಂದರು.. ಇನ್ನು ದಸರಾದೊಳಗೆ ಕೊರೊನಾ ನಿಯಂತ್ರಣಕ್ಕೆ ಬಂದ್ರೆ, ಮುಂದಿನವಾರ ಮತ್ತೊಂದು ಸಭೆ ನಡೆಸಿ, ಕೆಲವೊಂದು ವಿನಾಯಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಅದೇನೆ ಇರಲಿ, ಈ ವರ್ಷವಾದ್ರೂ, ಅದ್ಧೂರಿಯಾಗಿ ದಸರಾ ನಡೆಯಬಹುದು ಕಾಯುತ್ತಿದ್ದವರಿಗೆ ಕೊರೊನಾ ನಿರಾಸೆ ಮೂಡಿರೋದಂತು ಸುಳ್ಳಲ್ಲ..

Related Stories

No stories found.
TV 5 Kannada
tv5kannada.com