Tuesday, November 29, 2022

ಬ್ಯಾನರ್​ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

Must read

ರಾಹುಲ್​ ಗಾಂಧಿ ನೇತೃತ್ವದ ಜೋಡೋ ಪಾದಯಾತ್ರೆ ನಾಳೆ ರಾಜ್ಯಕ್ಕೆ ಆಗಮಿಸಲಿದೆ. ಈ ಹಿನ್ನೆಲೆ ಭಾರತ್​ ಜೋಡೋ ಱಲಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಗುಂಡ್ಲುಪೇಟೆಯಲ್ಲಿ ರಾಹುಲ್​ ಗಾಂಧಿ ಆಗಮನ ಹಿನ್ನೆಲೆ ಅದ್ಧೂರಿ ಸ್ವಾಗತಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗ್ತಿದ್ದು, ಬ್ಯಾನರ್​ಗಳನ್ನ ಅಳವಡಿಸಲಾಗಿದೆ. ಆದರೆ ಕಿಡಿಗೇಡಿಗಳು ಗುಂಡ್ಲುಪೇಟೆ ಬಳಿ ಫ್ಲೆಕ್ಸ್​ ಹಾಗೂ ಬ್ಯಾನರ್​ಗಳನ್ನ ಹರಿದು ವಿಕೃತಿ ಮೆರೆದಿದ್ದಾರೆ.
ಜೋಡೋ ಪಾದಯಾತ್ರೆಯ ಬ್ಯಾನರ್​ಗಳ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದ್ದು, ಫ್ಲೆಕ್ಸ್​ ಹಾಗೂ ಬ್ಯಾನರ್​ಗಳನ್ನ ಹರಿದು ಹಾಕಿದ್ದಾರೆ. ರಾಹುಲ್​ ಗಾಂಧಿ, ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯರ ಫೋಟೋಗಳಿರುವ ಬ್ಯಾನರ್​ ಹರಿದು ಪುಂಡಾಟ ಮೆರೆದಿದ್ದಾರೆ.
ಇನ್ನು ಕಿಡಿಗೇಡಿಗಳು ಬ್ಯಾನರ್​ ಹರಿದ ವಿಚಾರಕ್ಕೆ ಸುರ್ಜೇವಾಲಾ ಕಿಡಿಕಾರಿದ್ದು, ಫ್ಲೆಕ್ಸ್​, ಬ್ಯಾನರ್​ ಹರಿದ ಫೋಟೋ ಟ್ವೀಟ್​ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಜೋಡೋ ಯಾತ್ರೆಯ ಬಗ್ಗೆ 40% ಕಮಿಷನ್​ ಸರ್ಕಾರಕ್ಕೆ ಅಸೂಯೆ ಶುರುವಾಗಿದೆ. ಭಾರತ್​ ತೋಡೋ ತಂಡದವರು ಪೋಸ್ಟರ್​ಗಳನ್ನ ಹರಿದು ಹಾಕಿದ್ದಾರೆ. ಈ ರೀತಿ ಮಾಡುವವರು ಮೊದಲು ನಿಮ್ಮ ಸರ್ಕಾರವನ್ನ ಪ್ರಶ್ನಿಸಿ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ ಕಿಡಿಕಾರಿದ್ದಾರೆ.

Latest article