Tuesday, August 16, 2022

ಗುಲಬರ್ಗಾ ವಿವಿ ವಿರುದ್ಧ ಗಂಭೀರ ಆರೋಪ: ಹಣಕ್ಕಾಗಿ ಅಂಕಪಟ್ಟಿ ಮಾರಾಟ ಮಾಡ್ತಿದ್ಯಾ ವಿಶ್ವವಿದ್ಯಾಲಯ ..?

Must read

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಹಣಕ್ಕಾಗಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಣ ನೀಡಿದರೆ ಉತ್ತೀರ್ಣರಾಗಿರುವ ಅಂಕಪಟ್ಟಿಯನ್ನು ವಿಶ್ವವಿದ್ಯಾಲಯವೇ ನೀಡುತ್ತಿದೆ ಎನ್ನಲಾಗಿದೆ.

ಮೌಲ್ಯಮಾಪನ ವಿಭಾಗದ ಎಫ್​ಡಿಎಗಳೇ ಈ ರೀತಿಯ ಕೆಲಸ ಮಾಡುತ್ತಿದ್ದು, 30 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಯೊಬ್ಬರು ಸ್ನಾತಕ್ಕೋತ್ತರ ಪದವಿ ದಾಖಲಾತಿಗೆ ತೆರಳಿದ ಸಂದರ್ಭದಲ್ಲಿ ಕಲಬುರಗಿ ವಿಶ್ವವಿದ್ಯಾಲಯ ಮಾಡಿರುವ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಎಫ್​ಡಿಎ ವಿರುದ್ಧ ವಿದ್ಯಾರ್ಥಿ ವಿಶ್ವವಿದ್ಯಾಲಯದ ಕುಲಪತಿಗೆ ದೂರು ನೀಡಿದ್ದಾರೆ.

Latest article