Sunday, October 2, 2022

ಬಿಜೆಪಿಯವರಿಗೆ ಅದು ಇದ್ರೆ..!- ಸಿ.ಎಂ.ಇಬ್ರಾಹಿಂ

Must read

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡುವ ಭರದಲ್ಲಿ ಯಡವಟ್ಟು ಮಾಡಿದ್ದಾರೆ. ವಿಧಾನಸೌಧದಲ್ಲಿ ವಕ್ಫ್​​ ಬೋರ್ಡ್​ ಆಸ್ತಿ ತನಿಖೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ಬಿಜೆಪಿಯವರಿಗೆ ಧಮ್​ ಇಲ್ಲ ಎಂದು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಐಎಂಎಸ್​ ಕೇಸ್​ಗೆ ಯಾರು ಜವಾಬ್ದಾರರು. ಯಾಕೆ ಯಾರನ್ನೂ ಹಿಡಿಯಲಿಲ್ಲ. ಅಮಾನತು ಬ್ಯಾಂಕ್​ ಹಗರಣ ಯಾಕೆ ಹೊರಬರಲಿಲ್ಲ. ಸಹಕಾರ ಸಂಘ ನಿಮ್ಮ ಕೈಯಲ್ಲೇ ಇದೆ. ಆದರೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ನಮ್ಮ ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬರಲಿ ಚಿಕ್ಕಪ್ಪನ ಮಕ್ಕಳಿಗೆ ಒಂದು ಜೈಲು, ದೊಡ್ಡಪ್ಪನ ಮಕ್ಕಳಿಗೆ ಇನ್ನೊಂದು ಜೈಲಿಗೆ ಹಾಕುತ್ತೇವೆ ಎಂದ ಸಿ.ಎಂ.ಇಬ್ರಾಹಿಂ ಆಕ್ರೋಶ ಹೊರಹಾಕಿದ್ದರು.

Latest article