'ಸುಮ್ಮನಿದ್ದರೆ ತುಂಬಾ ಒಳ್ಳೆಯದು' - ಸಿಎಂ ಬಿಎಸ್​ವೈ ಖಡಕ್​ ಮಾತು

ಸುಮ್ಮನಿದ್ದರೆ ತುಂಬಾ ಒಳ್ಳೆಯದು. ನೀವು ಮಾತನಾಡುತ್ತಿರುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ
'ಸುಮ್ಮನಿದ್ದರೆ ತುಂಬಾ ಒಳ್ಳೆಯದು' - ಸಿಎಂ ಬಿಎಸ್​ವೈ ಖಡಕ್​ ಮಾತು

ಶಿವಮೊಗ್ಗ: ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.

ಇಂದು ಶಿವಮೊಗ್ಗ ಹೊರ ವಲಯದ ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ರಜತ ಮಹೋತ್ಸವದ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಸ್ಥಾಪನೆ ಮೂಲಕ ಹೊಸ ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

ಇನ್ನು ಜಿಲ್ಲೆಯ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಜಿಲ್ಲೆಯಲ್ಲಿ 350 ಆಸನದ ಕೈಗಾರಿಕಾ ಭವನ ನಿರ್ಮಾಣಕ್ಕೆ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದವರು ರಾಮ ಮಂದಿರಕ್ಕೆ 70 ಲಕ್ಷ ರೂ. ನೆರವು ನೀಡಿದ್ದೀರಿ. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ಧರ್ಮಾತೀತವಾಗಿ ದೇಣಿಗೆ ನೀಡಿರುವುದು ಸಂತಸದ ವಿಷಯ. ದೇಣಿಗೆ ಸಂಗ್ರಹ ವಿಷಯದಲ್ಲಿ ಯಾರಿಗೂ ಬಲವಂತ ಮಾಡುತ್ತಿಲ್ಲ. ಸ್ವಯಂ ಪ್ರೇರಿತವಾಗಿ ನೀಡುತ್ತಿದ್ದಾರೆ ಎಂದರು.

ಜನರಿಂದ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಎಂಬ ವಿರೋಧ ಪಕ್ಷದವರ ಹೇಳಿಕೆ ಅರ್ಥವಿಲ್ಲದ್ದು. ಅಯೋಧ್ಯೆಯಲ್ಲಿ ರಾಮ ಮಂದಿರವಿತ್ತು ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಅಯೋಧ್ಯೆ ಬಿಟ್ಟು ಬೇರೆ ಕಡೆ ಮಂದಿರ ನಿರ್ಮಾಣ ಮಾಡಿದರೆ ದೇಣಿಗೆ ನೀಡುತ್ತೇವೆ ಎಂಬ ಹೇಳಿಕೆ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿದಂತೆ. ವಿರೋಧ ಪಕ್ಷದವರು ಸ್ವಲ್ಪ ಯೋಚಿಸಿ ಮಾತನಾಡಬೇಕು. ಸುಮ್ಮನಿದ್ದರೆ ತುಂಬಾ ಒಳ್ಳೆಯದು. ನೀವು ಮಾತನಾಡುತ್ತಿರುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಟೀಕೆ-ಟಿಪ್ಪಣಿ ಮಾಡದೇ ಸುಮ್ಮನೀರಿ, ಅದರಿಂದ ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತೇ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಮಾತನಾಡಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ಯಾರ ಮೇಲೂ ಒತ್ತಡ ಹೇರಿಲ್ಲ. ಆದರೆ, ವಿಪಕ್ಷದ ನಾಯಕರು ಈ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಹಗುರವಾಗಿ ಮಾತನಾಡುವವರು ಎಚ್ಚರವಹಿಸಬೇಕು ಎಂದಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಶಿವಮೊಗ್ಗ ಜಿಲ್ಲೆಯ ಜನ ಏನು ಕೇಳಿದ್ದಾರೋ ಅದೆಲ್ಲವನ್ನೂ ಕೊಟ್ಟಿದ್ದೇನೆ. ಈ ಬಾರಿಯ ಬಜೆಟ್​ನಲ್ಲಿಯೂ ಇತಿಮಿತಿ ನೋಡಿಕೊಂಡು ಶಿವಮೊಗ್ಗ ಜಿಲ್ಲೆಗೆ ಕೊಡುಗೆ ನೀಡಲಾಗುವುದು ಎಂದು ಸಿಎಂ ಬಿಎಸ್​ವೈ ಮಾತನಾಡಿದ್ದಾರೆ.

Related Stories

No stories found.
TV 5 Kannada
tv5kannada.com