Tuesday, August 16, 2022

ಚೈನ್​​ ಲಿಂಕ್​ ಆನ್​​ಲೈನ್​ ಕಂಪನಿ ಹೆಸರಿನಲ್ಲಿ ವಂಚನೆ: ಮೂವರ ಬಂಧನ

Must read

ತುಮಕೂರು: ಚೈನ್​​ ಲಿಂಕ್​ ಆನ್​​ಲೈನ್​ ಕಂಪನಿ ಹೆಸರಿನಲ್ಲಿ ಯುವಕ ಹಾಗೂ ಯುವತಿಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಮುಗಿಸಿರುವವರನ್ನೇ ಟಾರ್ಗೆಟ್​ ಮಾಡುತ್ತಿದ್ದ ಚೇಂಜ್ ಆಫ್ ಯುವರ್ ಲೈಪ್ ಎಂಬ ಕಂಪನಿ ಯುವಕರಿಂದ 40ರಿಂದ50 ಸಾವಿರ ಹಣ ಪಡೆದು ವಂಚಿಸಿದೆ.

ಎರಡು ಮೂರು ದಿನ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡುತ್ತಿದ್ದ ಕಂಪನಿ, ಇದೊಂದು ಚೈನ್ ಲಿಂಕ್ ಇದ್ದ ಹಾಗೆ. ನೀವು ಎಷ್ಟು ಜನರನ್ನು ನಮ್ಮ ಕಂಪನಿಗೆ ಸೇರಿಸುತ್ತೀರಾ, ಅದರಂತೆ ನಿಮಗೆ ಕೈ ತುಂಬಾ ‌ಹಣ, ಕಾರು, ಬಂಗಲೆ ಸಿಗುತ್ತದೆ ಎಂದು ನಂಬಿಸುತ್ತಿದ್ದರು. ಟ್ರೈನಿಂಗ್ ಮುಗಿದ ನಂತರ ಯಾರು ನಮಗೆ ಕೆಲಸ ಬೇಡ ನಮ್ಮ ಹಣ ವಾಪಸ್ ಕೊಡಿ ಎನ್ನುತ್ತಾರೆ. ಅಂತವರ ಮೇಲೆ ಪುಡಿರೌಡಿಗಳನ್ನ ಬಿಟ್ಟು ಹಲ್ಲೆ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ವಾಪಸ್ ಹಣ ಕೇಳಿದರೆ ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಇತ್ತ ತಮ್ಮ ಹಣವೂ ಇಲ್ಲದೇ ಕೆಲಸವು ಇಲ್ಲದೇ ಕಂಗಾಲಾದ ಯುವಕರು ತುಮಕೂರು ಗ್ರಾಮಾಂತರ ಪೋಲಿಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ತನಿಖೆ ನಡೆಸಿದ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Latest article