Sunday, October 2, 2022

ಸಿಲಿಕಾನ್​ ಸಿಟಿಯಲ್ಲಿ ‘ಪೇ ಸಿಎಂ’ ಪೋಸ್ಟರ್​ ಅಬ್ಬರ

Must read

ಸಿಲಿಕಾನ್​ ಸಿಟಿಯ ಗೋಡೆಗಳಲ್ಲಿ ‘ಪೇ ಸಿಎಂ’ ಪೋಸ್ಟರ್​ ಅಬ್ಬರ ಶುರುವಾಗಿದೆ. ಮೊನ್ನೆ ತೆಲಂಗಾಣದಲ್ಲಿ ಶುರುವಾಗಿದ್ದ ಪೋಸ್ಟರ್​ ವಾರ್​ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ​ ಶುರುವಾಗದೆ. ಕ್ಯೂಆರ್​ ಕೋಡ್​ ಜೊತೆಗೆ ಸಿಎಂ ಬೊಮ್ಮಾಯಿ ಭಾವಚಿತ್ರ ಇದ್ದು, ನಗರದ ಮೂರ್ನಾಲ್ಕು ಕಡೆ ಗೋಡೆಗಳ ಮೇಲೆ ಪೋಸ್ಟರ್​ಗಳನ್ನ ಅಂಟಿಸಿ ಲೇವಡಿ ಮಾಡಲಾಗಿದೆ.
ಇನ್ನು ನರದಾದ್ಯಂತ ‘PAY CM’ ಎಂಬ QR ಕೋಡ್​ ಪೋಸ್ಟರ್​ಗಳನ್ನ ಅಂಟಿಸಿ ವ್ಯಂಗ್ಯ ಮಾಡಲಾಗಿದ್ದು, ಇದನ್ನ ಸ್ಕ್ಯಾನ್​ ಮಾಡಿದ್ರೆ ಒಂದು ವೆಬ್​ಸೈಟ್​ ಸಿಗುತ್ತದೆ. ಈ ವೆಬ್​ಸೈಟ್​​ನಲ್ಲಿ 40% ಕಮಿಷನ್ ವಿಚಾರವನ್ನ ತಿಳಿಸಲಾಗಿದೆ. QR ಕೋಡ್ ಮೂಲಕ ಜನರು ದೂರು ನೀಡಲು ಅವಕಾಶ ಕೂಡ ನೀಡಲಾಗಿದ್ದು, ಈ ಮೂಲಕವೇ ಸರ್ಕಾರದ ವಿರುದ್ಧ ಜನ ಸಾಮಾನ್ಯರು ದೂರು ನೀಡಬಹುದಾಗಿದೆ,.
ಇನ್ನು ಈ ಪೋಸ್ಟರ್​​ನಿಂದ ಸಿಎಂ ಬೊಮ್ಮಾಯಿಗೆ ಭಾರೀ ಮುಜುಗರ ಉಂಟಾಗಿದ್ದು, ಪೋಸ್ಟರ್ ಯಾರು ಹಾಕಿದ್ದೆಂದು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಪೋಸ್ಟರ್ ಹಾಕಿದವರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ನಗರದಲ್ಲಿ ರಾತ್ರೋರಾತ್ರಿ ಪೋಸ್ಟರ್ ಹಾಕಿದ್ದು ಯಾರು? ಇದರ ಹಿಂದೆ ಯಾರ ಕೈವಾಡ ಇದೆ ಎಂಬುದರ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ಕೇಳಿರುವ ಸಿಎಂ ಬೊಮ್ಮಾಯಿ ಗೃಹ ಇಲಾಖೆಗೆ ಮಾಹಿತಿ ಕೇಳಿದ್ದಾರೆ.

Latest article