Tuesday, November 29, 2022

ನಾಳೆ ರಾಹುಲ್ ಪಾದಯಾತ್ರೆ ರಾಜ್ಯಕ್ಕೆ ಎಂಟ್ರಿ

Must read

ರಾಹುಲ್ ಗಾಂಧಿ ನೇತೃತ್ವದ ಜೋಡೋ ಪಾದಯಾತ್ರೆ ನಾಳೆ ರಾಜ್ಯಕ್ಕೆ ಎಂಟ್ರಿಯಾಗಲಿದೆ. ಇಂದು ಕೇರಳದಿಂದ ತಮಿಳುನಾಡಿನ ಗುಡಲೂರಿಗೆ ಪಾದಯಾತ್ರೆ ತಲುಪಿದ್ದು, ನಾಳೆ ಬೆಳಗ್ಗೆ ಗುಡಲೂರಿನಿಂದ ಮತ್ತೆ ಯಾತ್ರೆ ಆರಂಭವಾಗಲಿದೆ. ನಾಳೆ ಮಧ್ಯಾಹ್ನ ಚಾಮರಾಜನಗರದ ಗುಂಡ್ಲುಪೇಟೆಗೆ ರಾಹುಲ್​ ಗಾಂಧಿ ನೇತೃತ್ವದ ಪಾದಯಾತ್ರೆ ಆಗಮಿಸಲಿದೆ. ಇಂದು ಎರಡು ರಾಜ್ಯಗಳಲ್ಲಿ ಜೋಡೋ ಪಾದಯಾತ್ರೆ ಪೂರ್ಣಗೊಳ್ಳಲಿದೆ.
ಕೇರಳದಲ್ಲಿ 20 ದಿನಗಳ ಕಾಲ ಕಾಲ್ನಡಿಗೆ ಮುಗಿಸಿ ನಾಳೆ ರಾಜ್ಯಕ್ಕೆ ಪಾದಯಾತ್ರೆ ಎಂಟ್ರಿಯಾಗಲಿದೆ. ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಳ ಐಕ್ಯತಾ ಯಾತ್ರೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 511 ಕಿಲೋಮೀಟರ್​ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಲಿದೆ. ಈ ಹಿನ್ನೆಲೆ ಗುಂಡ್ಲುಪೇಟೆಯಲ್ಲಿ ರಾಹುಲ್ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಹುಲ್​ ಗಾಂಧಿ ಸ್ವಾಗತಕ್ಕೆ ನಾಳೆ ಬರೋಬ್ಬರಿ 25 ಸಾವಿರ ಜನ ಸೇರುವ ಸಾಧ್ಯತೆ ಇದೆ. ನಂತರ ಮೈಸೂರು, ಮಂಡ್ಯ, ತುಮಕೂರು ಮಾರ್ಗವಾಗಿ ನಡಿಗೆ ಸಾಗಲಿದೆ.

Latest article