Tuesday, November 29, 2022

ಕೊನೆಗೂ ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್​

Must read

ಕೊನೆಗೂ ಬಿಬಿಎಂಪಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್​ನಿಂದ ಈಗಾಗ್ಲೆ ಗ್ರೀನ್​ ಸಿಗ್ನಲ್ ಸಿಕ್ಕಿದ್ದು, ಡಿಸೆಂಬರ್​ 31ರ ಒಳಗೆ ಚುನಾವಣೆ ನಡೆಸಲು ​ಸೂಚನೆ ನೀಡಿದೆ. ಇನ್ನು ಮೀಸಲಾತಿ ಪಟ್ಟಿ ಘೋಷಿಸಿದ 30 ದಿನಗಳ ಒಳಗೆ ಚುನಾವಣೆ ನಡೆಸಲು ಹೈಕೋರ್ಟ್​ ಸೂಚನೆ ನೀಡಿದೆ.

ಅಲ್ಲದೇ ನವಂಬರ್​ 30ರಂದು ಮೀಸಲಾತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲು ಕೂಡ ಬಿಬಿಎಂಪಿಗೆ ಹೈಕೋರ್ಟ್​ಸೂಚನೆ ನೀಡಿದೆ. ಬಿಬಿಎಂಪಿ ಚುನಾವಣಾ ಪ್ರಕ್ರಿಯೆಗೆ 30 ದಿನಗಳ ಕಾಲಾವಕಾಶ ನೀಡಿದ್ದು, ವರ್ಷದ ಅಂತ್ಯದ ಒಳಗೆ ಚುನಾವಣೆ ಮುಕ್ತಾಯ ಆಗಬೇಕೆಂದು ಸೂಚನೆ ನೀಡಲಾಗಿದೆ. ಈ ಹಿಂದೆ ನಾಲ್ಕು ತಿಂಗಳುಗಳ ಕಾಲಾವಕಾಶ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ಆದ್ರೀಗ ಕೇವಲ 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆಗೆ ಹೈಕೋರ್ಟ್​​ ಸೂಚನೆ ನೀಡಿದೆ.

Latest article