Monday, January 30, 2023

ಯಾದಗಿರಿ: ಹಾಡಹಗಲೇ ಯುವತಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕ

Must read

ಯಾದಗಿರಿ: ಯುವತಿ ಮೇಲೆ ಹಾಡಹಗಲೇ ಅತ್ಯಾಚಾರವೆಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಹಳ್ಳಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಯುವತಿ ಏಪ್ರಿಲ್​ 26ರಂದು ಕೆಲಸ ಮುಗಿಸಿ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಡಿಸೇಲ್​ ಹಾಕಿಸಬೇಕು ಎಂದು ಆಟೋ ಬೇರೆ ಕಡೆ ತಿರುಗಿಸಿದ್ದ ಆರೋಪಿ,  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಅಲ್ಲದೇ ಯುವತಿ ಮೇಲೆ ಅತ್ಯಾಚಾರವೆಸಗುವ ದ್ಯಶ್ಯವನ್ನು ಆಟೋ ಚಾಲಕನ ಸ್ನೇಹಿತ ವಿಡಿಯೋ ಸೆರೆ ಹಿಡಿದಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಯುವತಿ ಚಿಕ್ಕಪ್ಪ ಯಾದಗಿರಿ ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಆರೋಪಿ ಹಾಗೂ ಆತ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

Latest article