ಬೆಂಗಳೂರು: ‘ಕ್ರೀಮ್’ ಚಿತ್ರದ ಶೂಟಿಂಗ್ ವೇಳೆ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆಗೆ ಗಂಭೀರ ಗಾಯಗಳಾಗಿವೆ.
ಆಕ್ಷನ್ ಸಿಕ್ವೆನ್ಸ್ ಶೂಟಿಂಗ್ ವೇಳೆ ಸಂಯುಕ್ತ ಹೆಗ್ಡೆಗೆ ಪೆಟ್ಟಾಗಿದೆ. ಡ್ಯೂಪ್ ಬಳಸದೇ ಆಕ್ಷನ್ ಮಾಡುವ ವೇಳೆ ಸಂಯುಕ್ತ ಕಾಲು ಟ್ವಿಸ್ಟ್ ಆಗಿದೆ.
ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ವೇಳೆ ಘಟನೆ ಜರುಗಿದೆ. ಸಂಯುಕ್ತ ಕಾಲಿಗೆ ಪೆಟ್ಟು ಬಿದ್ದ ಕಾರಣ ಚಿತ್ರತಂಡ ಶೂಟಿಂಗ್ ನಿಲ್ಲಿಸಿದೆ.
ಸದ್ಯ ನಟಿ ಸಂಯುಕ್ತ ಹೆಗ್ಡೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‘ಕ್ರೀಮ್’ ಅಭಿಷೇಕ್ ಬಸಂತ್ ನಿರ್ದೇಶನದ ಸಿನಿಮಾವಾಗಿದೆ.