Monday, January 30, 2023

ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ಫಿಡಿಲಿಟಸ್ ಸಂಸ್ಥಾಪಕ ಅಚ್ಚುತ್ ಗೌಡರಿಗೆ ಮುಖ್ಯಮಂತ್ರಿಯಿಂದ ಸನ್ಮಾನ

Must read

ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ಅವರಿಗೆ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಸನ್ಮಾನ ಮಾಡಿದರು.
ಇಂದು ನಗರದ ಡಿ.ಎ ಪಾಂಡು ಮೆಮೋರಿಯಲ್ ಆರ್.ವಿ ದಂತ ಕಾಲೇಜಿನಲ್ಲಿ ನಡೆದ “ಯುವ ಸಂಭಾಷಣೆ – ಚರ್ಚೆ ವಿತ್ ಕಾಮನ್ ಮ್ಯಾನ್“ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾಧಕರನ್ನು ಸನ್ಮಾನಿಸಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ನೆರೆದಿದ್ದ ಹಾಗೂ ಆನ್ ಲೈನ್ ಮೂಲಕ ವಿಧ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಿಧ್ಯಾರ್ಥಿ ಯುವ ಸಮೂಹ ರಾಜ್ಯದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ವಿಧ್ಯಾರ್ಥಿಗಳೊಡನೆ ವಿಧ್ಯಾರ್ಥಿಯಾಗಿ ಸುದೀರ್ಘ ಸಂವಾದ ನಡೆಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಭಾಜಪಾ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ಯುವ ಸಂಭಾಷಣೆ ಕಾರ್ಯಕ್ರಮದಲ್ಲಿ ರಾಜ್ಯದ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿ ವಿಜೇತ ಪಂಕಜ್ ಅಡ್ವಾಣಿ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಎಂ.ಪಿ ಶ್ಯಾಮ್, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್, ಕಾರ್ಯಕಾರಿಣಿ ಸದಸ್ಯ ಮಾಲತೇಶ್ ಸಿಗಸೆ, ಕೂ ಆಪ್ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಫ್ರೀಡಂ ಆಪ್ ಸಂಸ್ಥಾಪಕ ಸಿ.ಎಸ್ ಸುಧೀರ್, ಚಿತ್ರ ನಟರಾದ ಸಂಜನಾ ಆನಂದ್, ಚಂದನ್ ಶೆಟ್ಟಿ, ಪ್ರಣಿತಾ ಸುಭಾಷ್ ಮುಂತಾದವರು ಉಪಸ್ಥಿತರಿದ್ದರು.

Latest article