Tuesday, August 16, 2022

ಶಿವಮೊಗ್ಗಕ್ಕೆ ಕಂಟಕವಾದ ಓಂ ಶಕ್ತಿ ಯಾತ್ರೆ: ಮತ್ತೆ ಆರು ಯಾತ್ರಿಕರಲ್ಲಿ ಕೊರೊನಾ ಸೋಂಕು

Must read

ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸ್ಫೋಟವಾಗಿದ್ದು, ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ ಮತ್ತಷ್ಟು ಯಾತ್ರಿಕರಲ್ಲಿ ಕೊರೊನಾ ಸೋಂಕು ದೃಢವಾಗಿದೆ.

ತಮಿಳುನಾಡಿನ ಮೇಲ್ ಮರತ್ತೂರಿನಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ಶಿವಮೊಗ್ಗದಿಂದ‌ 82 ಬಸ್ಸುಗಳಲ್ಲಿ 4,300ಕ್ಕೂ ಹೆಚ್ಚು ಮಹಿಳೆಯರು ಓಂ ಶಕ್ತಿ ಯಾತ್ರೆಗೆ ತೆರಳಿದ್ದರು. ಯಾತ್ರೆ ಮುಗಿಸಿ ಬಂದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಯಾತ್ರೆಗೆ ತೆರಳಿದ್ದ ಎಲ್ಲರನ್ನೂ ಕ್ವಾರಂಟೀನ್​ಗೆ ಒಳಪಡಿಸಲಾಗಿತ್ತು.

ಈ ಹಿಂದೆ ಓಂಶಕ್ತಿ ಯಾತ್ರೆಗೆ ಹೋಗಿದ್ದ 14 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸದ್ಯ ಸೋಂಕಿತರನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಶಿವಮೊಗ್ಗದಲ್ಲಿ ಒಟ್ಟು 59 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 117ಕ್ಕೆ ಏರಿದೆ.

Latest article