Friday, January 21, 2022

ರಸ್ತೆ ಬದಿಯಲ್ಲಿ ಕಡಲೇಕಾಯಿ ಮಾರುತ್ತಿರುವ ಪಾಕ್ ಕ್ರಿಕೇಟಿಗ

Must read

ಪಾಕ್ ಕ್ರಿಕೆಟಿಗ ರಸ್ತೆ ಬದಿ ಕಡಲೇಕಾಯಿ ಮಾರೋ ವೀಡೀಯೋ ಸಾಕಷ್ಡು ವೈರಲ್ ಆಗಿದೆ ..ಹೌದು ಅಬುದಾಬಿಯಲ್ಲಿ ಟಿ20 ಲೀಗ್ ನಲ್ಲಿ ಆಡಿರುವ ಪಾಕಿಸ್ತಾನದ ವೇಗಿ ವಹಾಬ್ ರಿಯಾಝ್ ರಸ್ತೆ ಬದಿ ಕಡಲೆಕಾಯಿ ಮಾರುತ್ತಿದ್ದಾರೆ.

ಭಾರತದ ವಿರುದ್ಧ ಅಧ್ಬುತವಾಗಿ ಬೌಲಿಂಗ್ ಮಾಡಿ ಬೇಷ್ ಎನಿಸಿಕೊಂಡಿದ್ದ ವಹಾಬ್ ರಿಯಾಝ್ ತಮ್ಮ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ತನಗೆ ಬಾಲ್ಯದ ನೆನಪಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ . ಆ ವಿಡಿಯೋದಲ್ಲಿ ‘ಕಡ್ಲೆಕಾಯಿ ಬೇಕಾ ಕಡ್ಲೆಕಾಯಿ…’ ಎಂದು ಜನರನ್ನು ಕೇಳುತ್ತಿರುವುದು ಕಂಡುಬಂದಿದೆ. ‘ನಾನು ಕಡಲೆಕಾಯಿ ಮಾರುತ್ತಿದ್ದೇನೆ. ನನಗೆ ನನ್ನ ಬಾಲ್ಯದ ಸುಂದರ ದಿನಗಳು ನೆನಪಾಗುತ್ತಿದೆ. ಈ ವಿಶೇಷ ಕೈಗಾಡಿಯಲ್ಲಿ ನಾನು ಕಡಲೆಕಾಯಿ ಮಾರಾಟ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ

ಕೆಲ ಸಮಯದಿಂದ ಕ್ರಿಕೇಟ್ ನಿಂದ ದೂರವಿರೋದಾಗಿ ಹೇಳಿರುವ ವಹಾಬ್ ಹಲವು ಒನ್ ಡೇ ಇಂಟರ್ನ್ಯಾಷನಲ್, ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ‌. ಇನ್ನು ಈ ವಿಡೀಯೋ ಬಗ್ಗೆ ಸಾಕಷ್ಟು ಜನ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಹಾಗೆ ಅವರ ಸಹ ಆಟಗಾರ ಅಹ್ಮದ್ ಶೇಹಜಾದ್ ಕೂಡ ರೀಟ್ವೀಟ್ ಮಾಡಿದ್ದು ನನಗೂ ಸ್ವಲ್ಪ ಕಡಲೇಕಾಯಿ ಬೇಕು ಎಂದಿದ್ದಾರೆ. ಸದ್ಯ ಈ ಕಡಲೆಕಾಯಿ ವಿಡಿಯೋಗೆ ಹಲವು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ

Latest article