Thursday, May 19, 2022

IPL 2020: ಇಂದು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್​ ರೈಡರ್ಸ್​ ತಂಡಗಳ ನಡುವೆ ಪಂದ್ಯ

Must read

ಅಬುಧಾಬಿ: ಇಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಫರ್ಗ್ಯುಸನ್ ತಮ್ಮ ಬೌಲಿಂಗ್​ ಕೈಚಳಕದಿಂದ ಜಾದೂ ಮಾಡಿದರೆ ಕೋಲ್ಕತ್ತ ನೈಟ್​ ರೈಡರ್ಸ್​ ತಂಡ ಪ್ಲೇ ಆಫ್‌ ತಲುಪಲು ಮತ್ತಷ್ಟು ಬಲ ಸಿಗುತ್ತದೆ.

ಆರ್​ಸಿಬಿ ತಂಡ ಬ್ಯಾಟಿಂಗ್​ ಲೈನ್​ಅಪ್​ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಕಟ್ಟಿಹಾಕಲು ಕೋಲ್ಕತ್ತ ತಂಡ ನಾಯಕ ಏಯಾನ್​ ಮಾರ್ಗನ್​ ರಣತಂತ್ರ ರೂಪಿಸದೇ ಇರಲಾರರು. ಹೋದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೂಪರ್‌ ಓವರ್‌ನಲ್ಲಿ ಕೋಲ್ಕತ್ತ ಗೆಲುವಿನಲ್ಲಿ ಮಿಂಚಿದ್ದ ಲಾಕಿ ಫರ್ಗ್ಯುಸನ್ (15ಕ್ಕೆ 3 ವಿಕೆಟ್​) ಅವರೇ ಮಾರ್ಗನ್ ವಿಶ್ವಾಸವಿರಿಸಿರುವ ಬೌಲರ್. ಆದರೆ, ಆರ್​ಸಿಬಿ ತಂಡ ಈಗಾಗಲೇ 12 ಪಾಯಿಂಟ್ಸ್‌ಗಳನ್ನು ತಮ್ಮದಾಗಿಸಿಕೊಂಡಿರುವ ಕೊಹ್ಲಿ ಬಳಗವು ಮತ್ತೊಂದು ಜಯದ ದಾಖಲಿಸುವ ವಿಶ್ವಾಸದಲ್ಲಿದೆ. ಬೌಲಿಂಗ್‌ ವಿಭಾಗದಲ್ಲಿ ಕ್ರಿಸ್ ಮೊರಿಸ್, ನವದೀಪ್ ಸೈನಿ ಮತ್ತು ಯಜುವೇಂದ್ರ ಚಾಹಲ್ ತಂಡದ ಗೆಲುವಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶನ ನೀಡುತ್ತಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಕರ್ನಾಟಕದ ದೇವದತ್ತ ಪಡಿಕ್ಕಲ್​​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಇನಿಂಗ್ಸ್‌ಗೆ ಕಟ್ಟಲು ಯೋಜನೆ ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಎಬಿ ಡಿವಿಲಿಯರ್ಸ್‌ ಇವರೆಲ್ಲರನ್ನೂ ಮೀರಿಸಿ, ಸೋಲಿನ ಹಾದಿಯಲ್ಲಿ ಸಾಗುವ ತಂಡವನ್ನು ಗೆಲುವಿನತ್ತ ಎಳೆದು ಸಾಗುವ ಬ್ಯಾಟಿಂಗ್​ ವೈಖರಿ ಅವರಿಗಿದೆ.

ಈ ಆವೃತ್ತಿಯಲ್ಲಿ 10 ಅಂಕ ಗಳಿಸಿರುವ ಕೋಲ್ಕತ್ತದಲ್ಲಿ ಉತ್ತಮ ಬ್ಯಾಟಿಂಗ್ ಲೈನ್​ಅಪ್​ ಇದೆ. ದಿನೇಶ್ ಕಾರ್ತಿಕ್​, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ ಉತ್ತಮ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ ವಿಭಾಗದ ಪ್ಯಾಟ್ ಕಮಿನ್ಸ್‌ ಬ್ಯಾಟ್​ನಿಂದ ರನ್‌ಗಳನ್ನು ಹರಿದು ಬರುವ ಸಾಧ್ಯತೆಯಿದೆ. ಆದರೆ, ಅಲ್​ರೌಂಡರ್​ ಆ್ಯಂಡ್ರೆ ರಸೆಲ್ ಬ್ಯಾಟ್‌ನಿಂದ ಮಅತ್ರ ಸಿಕ್ಸರ್, ಬೌಂಡರಿಗಳು ಸಿಡಿಯುತ್ತಿಲ್ಲ. ಇದು ಕೆಕೆಆರ್​ ನಾಯಕ ಏಯಾನ್​ ಮಾರ್ಗನ್ ಬಳಗದಲ್ಲಿ ಚಿಂತೆಗೆ ಕಾರಣವಾಗಿದೆ.

Latest article