Wednesday, June 29, 2022

IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್​ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸವಾಲ್​

Must read

ಶಾರ್ಜಾ: ಐಪಿಎಲ್​ನ ಈ ಆವೃತ್ತಿಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಸಂಜೆ ಕಣಕ್ಕಿಳಿಯಲಿದೆ.

ಸದ್ಯ ಡೆಲ್ಲಿ ತಂಡ​ ಆಡಿರುವ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಜಯ ದಾಖಲಿಸಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್​​ ತಂಡವು ಈಗ ಎಲ್ಲಾ ವಿಭಾಗಗಳಲ್ಲಿಯೂ ಉತ್ತಮವಾದ ಸ್ಥಿರತೆ ಹೊಂದಿದೆ. ತಂಡವು ಯಾವುದೇ ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ತಕ್ಷಣವೇ ಸರಿ ಮಾಡಿಕೊಂಡು ಫಲಿತಾಂಶವನ್ನು ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಬ್ಯಾಟಿಂಗ್​ ವಿಭಾಗದಲ್ಲಿ ನಾಯಕ ಶ್ರೇಯಸ್ ಅಯ್ಯರ್​, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್ ಮತ್ತು ಪೃಥ್ವಿ ಶಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್‌ ಮತ್ತು ಅಲ್​ರೌಂಡರ್​ ವಿಭಾಗದಲ್ಲಿ ರವಿಚಂದ್ರನ್​ ಆಶ್ವಿನ್, ಎನ್ರಿಕ್ ನೊಟಿಯೆ, ಅಕ್ಷರ್ ಪಟೇಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನೆಚ್ಚಿಕೊಂಡಿದೆ.

ಸದ್ಯ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಅನುಭವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂತ್ರಗಾರಿಕೆಯನ್ನು ಎದುರಿಸುವ ಸವಾಲು ಡೆಲ್ಲಿ ಕ್ಯಾಪಿಟಲ್ಸ್​​ ತಂಡ ನಾಯಕ ಶ್ರೇಯಸ್ ಅಯ್ಯರ್​ ಮುಂದಿದೆ. ಮೊದಲ ಹಂತದ ಮ್ಯಾಚ್​ನಲ್ಲಿ ಚೆನ್ನೈ ಎದುರು ಡೆಲ್ಲಿ ಗೆದ್ದಿತ್ತು.

ಎಂಎಸ್​ ಧೋನಿ ಬಳಗದಲ್ಲಿ ಶೇನ್ ವಾಟ್ಸನ್, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು ಮತ್ತು ರವೀಂದ್ರ ಜಡೇಜ ಅವರಿಂದಲೇ ರನ್‌ ಗಳಿಕೆಯ ನಿರೀಕ್ಷೆ ಮಾಡಬಹುದು. ಬೌಲಿಂಗ್​ ಮತ್ತು ಅಲ್​ರೌಂಡರ್​ ಸ್ಯಾಮ್ ಕರನ್, ದೀಪಕ್ ಚಾಹರ್ ಮತ್ತು ಶಾರ್ದೂಲ್ ಠಾಕೂರ್ ಅವರ ಡೆಲ್ಲಿ ಬ್ಯಾಟಿಂಗ್ ಬಳಗವನ್ನು ಕಟ್ಟಿಹಾಕುವ ಸವಾಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಸಂಜೆ ಕಣಕ್ಕಿಳಿಯಲಿದೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.

Latest article