Tuesday, May 17, 2022

ಮಾಜಿ ಕಫ್ತಾನ ಕೊಹ್ಲಿ ಬಗ್ಗೆ ಮಾಜಿ ಕೋಚ್ ಹೇಳಿದ್ದೇನು..?

Must read

ವಿರಾಟ್ ಕೊಹ್ಲಿ ಎರಡು ಅಥವಾ ಮೂರು ತಿಂಗಳು ವಿರಾಮ ತೆಗೆದುಕೊಂಡರೆ ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಬಹುದು ಎಂದು ಟೀಂ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ನಂತರ ಕೊಹ್ಲಿ ಟೆಸ್ಟ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಅಂದರೆ 68 ಪಂದ್ಯಗಳಲ್ಲಿ ಅವರು ಭಾರತದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಅವರು 40 ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕರಾಗಿದ್ದಾರೆ. ಕೊಹ್ಲಿ ಶಾಂತವಾಗಿರಬೇಕು ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸಬೇಕು ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ. ಭಾರತದ ಮಾಜಿ ನಾಯಕ ಇನ್ನೂ ಐದು ವರ್ಷಗಳ ಕಾಲ ಕ್ರಿಕೆಟ್ ಆಡಬಹುದು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಶೋಯಿಬ್ ಅಖ್ತರ್ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ “ಕೊಹ್ಲಿ 33 ವರ್ಷ ವಯಸ್ಸಿನವರು, ಅವರು ಮುಂದಿನ ಐದು ವರ್ಷಗಳ ವರೆಗೆ ಉತ್ತಮ ಕ್ರಿಕೆಟ್ ಆಡಬಹುದು. ಕೊಹ್ಲಿ ಶಾಂತವಾಗಿದ್ದರೆ ಮತ್ತು ತನ್ನ ಬ್ಯಾಟಿಂಗ್ ಮೇಲೆ ಗಮನ ಹರಿಸಿದರೆ ಬಹುಶಃ ಅವರು ಆಟದಿಂದ ವಿರಾಮ ತೆಗೆದುಕೊಳ್ಳಬಹುದು. ಅವರು ಎರಡು ಅಥವಾ ಮೂರು ತಿಂಗಳು ಹೊರಗೆ ಕುಳಿತರೆ ಅಥವಾ ಸರಣಿಗೆ ವಿರಾಮ ತೆಗೆದುಕೊಂಡರೆ, ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಸಲಹೆ ನೀಡಿದರು. ‘

 

 

 

Latest article