ಮಾಮರವೆಲ್ಲೋ, ಕೋಗಿಲೆಯೆಲ್ಲೋ ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ಅನಿಲ್ ಕುಂಬ್ಳೆ!

ಮಾಮರವೆಲ್ಲೋ, ಕೋಗಿಲೆಯೆಲ್ಲೋ ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ಅನಿಲ್ ಕುಂಬ್ಳೆ!

ದುಬೈ: ಕೊರೊನಾ ಕಾರಣ ಅರ್ಧಕ್ಕೆ ನಿಂತಿದ್ದ ಐಪಿಎಲ್-2021ರ ಟೂರ್ನಿ, ಈಗ ಎರಡನೇ ಭಾಗ ಆರಂಭಕ್ಕೆ ಇನ್ನೂ 4 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಎಲ್ಲ ತಂಡಗಳು ದುಬೈನಲ್ಲಿ ಬೀಡುಬಿಟ್ಟಿವೆ. ಎಲ್ಲ ತಂಡದ ಆಟಗಾರರು ಸದ್ಯ ಕ್ವಾರಂಟೈನ್​ನಲ್ಲಿದ್ದು, ಆಟಗಾರರನ್ನು ಹುರಿದುಂಬಿಸಲು ಆಯಾ ತಂಡಗಳು ಮನರಂಜನಾ ಕಾರ್ಯಕ್ರಮ ಆಯೋಜಿಸಿವೆ.

ಹೀಗೆ ಪಂಜಾಬ್ ಕಿಂಗ್ಸ್ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಕೋಚ್ ಅನಿಲ್ ಕುಂಬ್ಳೆ, ಕನ್ನಡ ಸಿನಿಮಾದ ಜನಪ್ರಿಯ ಹಾಡು ಹಾಡುವ ಮೂಲಕ ಎಲ್ಲರ ಕನ್ನಡಿಗರ ಮನಗೆದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಂಬ್ಳೆ 1974ರಲ್ಲಿ ತೆರೆಕಂಡಿದ್ದ ಸಾಹಸಸಿಂಹ ವಿಷ್ಣುವರ್ಧನ್, ಭಾರತಿ, ಲೀಲಾವತಿ ಅಭಿನಯದ ದೇವರಗುಡಿ ಚಿತ್ರದ "ಮಾಮರವೆಲ್ಲೋ ಕೋಗಿಲೆಯೆಲ್ಲೋ" ಗೀತೆಯನ್ನು ಹಾಡುವ ಮೂಲಕ ದುಬೈನಲ್ಲಿ ಕನ್ನಡದ ಕಂಪು ಪಸರಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ಕನ್ನಡಿಗರ ತಂಡ ಅನ್ನೋ ಮಾತಿದೆ. ಈ ತಂಡದಲ್ಲಿ ಕನ್ನಡಿಗರಿಗೆ ಹೆಚ್ಚು ಮಣೆ ಹಾಕಲಾಗುತ್ತದೆ. ಪಂಜಾಬ್​​ ತಂಡದಲ್ಲಿ ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆಎಲ್ ರಾಹುಲ್‌, ಮಯಾಂಕ್ ಅಗರ್ವಾಲ್, ಜೆ ಸುಚಿತ್ ಸೇರಿದಂತೆ ಹಲವು ಕನ್ನಡಿಗರಿದ್ದಾರೆ.

Related Stories

No stories found.
TV 5 Kannada
tv5kannada.com