ದುಬೈ: ಐಪಿಎಲ್ 2020 ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳಷ್ಟೇ ಇದೆ. ವಿಶ್ವಾದ್ಯಂತ ಕೋವಿಡ್ 19 ಹಾವಳಿ ಹಿನ್ನೆಲೆ ಈ ಬಾರಿ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯುವುದಿಲ್ಲದೇ, ಈ ಸಲ ಐಪಿಎಲ್ಗೆ ಪ್ರೇಕ್ಷಕರಿಲ್ಲದೇ ತಂಡಗಳು ಮೈದಾನದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
ಈ ವಿಷಯದ ಬಗ್ಗೆ ಆರ್ಸಿಬಿ ಟ್ವಿಟತ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಮ್ಮ ಅಭಿಪ್ರಾಯವನ್ನು ತಂಡದ ಹೆಡ್ಕೋಚ್ ಸೈಮನ್ ಕ್ಯಾಟಿಚ್ ಅವರು ಹಂಚಿಕೊಂಡಿದ್ದು, ಈ ರೀತಿಯ ವಾತಾವರಣದಲ್ಲಿ ಆಡಲು ಆರ್ಸಿಬಿ ತಂಡದ ಆಟಗಾರರು ಸ್ಪೂರ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಖಾಲಿ ಮೈದಾನ ಈ ಬಾರಿ ಆರ್ಸಿಬಿ ಆಟಗಾರರಿಗೆ ಯಾವುದೇ ತರಹದ ಆಡಚಣೆ ಉಂಟು ಮಾಡಲಾರದು. ಪ್ರೇಕ್ಷಕರಿಲ್ಲದೇ ಇರುವ ಸಂದರ್ಭದಲ್ಲಿ ಆಡಲು ಬೇಕಾಗುವಷ್ಟು ಸ್ಪೂರ್ತಿಯನ್ನು ಈಗಾಗಲೇ ಅವರು ಪಡೆದುಕೊಂಡಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಆಟಗಾರರಿಗೂ ಇದೊಂದು ದೊಡ್ಡ ಪಂದ್ಯಾವಳಿ ಎಂಬ ಬಗ್ಗೆ ಗೊತ್ತಿದೆ. ವೈಯಕ್ತಿಕವಾಗಿ ಹೇಳುವುದಾದರೇ ಕೆಲ ಯುವ ಆಟಗಾರರಿಗೆ ಸುತ್ತಲೂ ಜನರಿಲ್ಲದ ಕಾರಣದಿಂದಾಗಿ ಅವರು ಹೆಚ್ಚಿನ ಒತ್ತಡವಿಲ್ಲದೆ ಉತ್ತಮವಾಗಿ ಆಡಲಿದ್ದಾರೆ. ಈ ಬೆಳವಣಿಗೆ ತಂಡಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಆದರೆ, ಹಿರಿಯ ಆಟಗಾರರಿಗೆ ಇದು ಸ್ವಲ್ಪ ಕಠಿಣ ಸವಾಲ್ ಎಂದು ಅನಿಸಬಹುದು. ಪ್ರೇಕ್ಷಕರ ಸ್ಪೂರ್ತಿಯನ್ನು ಅವರು ಪಡೆದುಕೊಳ್ಳುವುದಕ್ಕೆ ಅಸಾಧ್ಯವಾಗಬಹುದು. ಆದರೆ, ನಮ್ಮ ತಂಡದ ಆಟಗಾರರಿಂದಲೇ ಇನ್ನೂ ಹೆಚ್ಚಿನ ಸ್ಪೂರ್ತಿಯನ್ನು ಪಡೆದುಕೊಂಡು ಅದ್ಭುತ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಕ್ಯಾಟಿಚ್ ಅವರು ಹೇಳಿದರು.
Head Coach Simon Katich talks about the processes behind the scenes and the challenges ahead of the team as the preparations begin for Dream 11 IPL 2020. #PlayBold #IPL2020 #WeAreChallengers pic.twitter.com/kFDtDAiy5s
— Royal Challengers Bangalore (@RCBTweets) September 4, 2020
13ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುಎಇನಲ್ಲಿ ನಿಗದಿಯಾಗಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಮೈದಾನದಲ್ಲಿ ಈ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದೆ.