Sunday, October 2, 2022

ಯುವತಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ

Must read

ಯುವತಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡದ ರಕ್ಷಿತ ಎಂಬಾಕೆಯ ಮೆದುಳು ನಿಶ್ಕ್ರೀಯಗೊಂಡಿತ್ತು. ಇದರಿಂದ ಆಕೆ ಬದುಕುವ ಸಾಧ್ಯತೆ ಬಹಳ ಕಮ್ಮಿ ಇದ್ದ ಕಾರಣ, ಆಕೆಯಅಂಗಾಂಗವನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇನ್ನು ಈಕೆಯ ಜೀವಂತ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆಕೆಯ ಹೃದಯವನ್ನು ಇನ್ನೊರ್ವ ರೋಗಿಗೆ ಕಸಿ ಮಾಡಲಾಗಿದೆ. ಹಾಗೆ ಉಳಿದ ಅಂಗಾಂಗಗಳನ್ನು ಚೆನೈ, ಬೆಂಗಳೂರು, ಮಣಿಪಾಲ್‌ಗೆ ರವಾನಿಸಲಾಗಿದೆ. ಇನ್ನು ಪ್ರತಮ ಪಿಯುಸಿಯಲ್ಲಿ ಒದುತ್ತಿದ್ದ ರಕ್ಷಿತಾ ಕೆಲ ದಿನಗಳ ಹಿಂದೆ ಅಂದ್ರೆ ಕಳೆದ ಭಾನುವಾರ , ನಗರದ ಹೌಸಿಂಗ್ ಬೋರ್ಡ್ ನಲ್ಲಿ ಬಸ್ ಇಳಿಯುವಾಗ ಕಾಲು ಜಾರಿ ಬಿದ್ದಿದ್ದಳು. ಇದರಿಂದ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಆಕೆಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳು ನಿಶ್ಕ್ರೀಯಗೊಂಡ ಪರಿಣಾಮ ಇದೀಗ ಆಕೆಯ ಅಂಗಾಗ ದಾನ ಮಾಡಿ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.

Latest article