Friday, January 21, 2022

ಕೆ.ಡಿ.ಶಿವಕುಮಾರ್ ಎನ್ನುವ ಮಾತನ್ನು ಪ್ರೂವ್ ಮಾಡಿ ತೋರಿಸ್ತಾ ಇದ್ದೀರಾ: ಈಶ್ವರಪ್ಪ ಪ್ರಶ್ನೆ

Must read

ಶಿವಮೊಗ್ಗ: ಕೋವಿಡ್ ಟೆಸ್ಟ್​ಗೆ ಬಂದ ಅಧಿಕಾರಿಗಳಿಗೆ ಡಿಕೆಶಿ ಬೈದಿರುವುದನ್ನು ಮಾಧ್ಯಮಗಳಲ್ಲಿ ನಾನು ನೋಡಿದೆ. ಒಂದು ರೀತಿಯಲ್ಲಿ ದಾದಾಗಿರಿ, ಗುಂಡಾಗಿರಿ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಇದೀಯಾ ಎಂದು ನೋಡಲು ಬಂದ ಅಧಿಕಾರಿಗಳಿಗೆ ಬೈದು ಕಳುಹಿಸಿದ್ರೆ ಹೇಗೆ..? ಕೋವಿಡ್ ಚೆಕ್ ಮಾಡುವುದು ಯಾರಿಗೆ ಒಳ್ಳೆಯದು. ನಿಮ್ಮ ಆರೋಗ್ಯಕ್ಕೆ ಅಲ್ಲವೇ ..? ಈ ರೀತಿ ದಾದಾಗಿರಿ, ಗುಂಡಾಗಿರಿ ಮಾಡುವ ಶಿವಕುಮಾರ್ ಎಂದು ಎಲ್ಲರಿಗೂ ಗೊತ್ತಿತ್ತು. ಇದು ಡಿ.ಕೆ.ಶಿವಕುಮಾರ್ ಅಲ್ಲ, ಕೆ.ಡಿ.ಶಿವಕುಮಾರ್ ಎನ್ನುವ ಮಾತನ್ನು ಎಲ್ಲರೂ ಹೇಳುತ್ತಿದ್ದರು. ಇದನ್ನು ನೀವು ಪ್ರೂವ್ ಮಾಡಿ ತೋರಿಸ್ತಾ ಇದ್ದೀರಾ. ಈಗಲೂ ಕೂಡ ಕಾಲ ಮಿಂಚಿಲ್ಲ‌. ದಯವಿಟ್ಟು ಮೇಕೆದಾಟು ಪಾದಯಾತ್ರೆ ನಿಲ್ಲಿಸಿ. ಕೋವಿಡ್ ಹೋದಮೇಲೆ ಲಕ್ಷ ಜನರನ್ನು ಸೇರಿಸಿ, ಶಕ್ತಿ ಪ್ರದರ್ಶನ ಮಾಡಿ.

ಸಿಎಂ ಆಗ್ಬೇಕು ಎಂಬ ಕನಸಿಟ್ಟು ಮಾಡುವ ಪಾದಯಾತ್ರೆಯನ್ನು ರಾಜ್ಯದ ಜನ ಕ್ಷಮಿಸಲ್ಲ. ಒಬ್ಬ ಮುಖ್ಯಮಂತ್ರಿ ಕರೆದುಕೊಂಡು ಹೋಗಿ ಜೈಲಿನಲ್ಲಿ ಇಡೋಣ್ವಾ..? ಮೊನ್ನೆ ತನಕ ಸಿಎಂ, ಮಂತ್ರಿಯಾಗಿದ್ದವರೇ ನಿಷೇಧಾಜ್ಞೆಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ರಾಜಕೀಯ ಮಾಡೋಕೆ ಪಾದಯಾತ್ರೆ ಮಾಡುತ್ತಿದ್ದಾರೆ‌. ಸಿದ್ದರಾಮಯ್ಯರನ್ನು ಪಕ್ಕಕ್ಕೆ ಸರಿಸಿ, ಸಿಎಂ ಆಗಲು ಡಿಕೆಶಿ ಹೊರಟ್ಟಿದ್ದಾರೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ನಿನ್ನೆಯಿಂದ ಅವರಿಗೆ ಹುಷಾರಿಲ್ಲ. ಸಿದ್ದರಾಮಯ್ಯರಿಗೆ ಕೋವಿಡ್ ಹಚ್ಚೋಕೆ ಡಿ.ಕೆ.ಶಿವಕುಮಾರ್ ಕಾರಣರಾಗ್ತಿದ್ದಾರೆ. ಪಾದಯಾತ್ರೆ ಹೆಸರಿನಲ್ಲಿ ರಾಜ್ಯದ ಜನರಿಗೆ, ಕಾಂಗ್ರೆಸಿಗರಿಗೆ ಕೋವಿಡ್ ಹರಡಿಸುವ ಕೆಲಸ ಮಾಡ್ತಿದ್ದಾರೆ.

ಬಿಜೆಪಿ-ಜೆಡಿಎಸ್ ಸೇರಿ ನನ್ನ ಜೈಲಿಗೆ ಹಾಕ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವೇನು ಪ್ಲಾನ್ ಮಾಡದೇ ನೀನೇ ತಿಹಾರ್ ಜೈಲಿಗೆ ಹೋಗಿಬಂದೆ. ತಿಹಾರ್ ಜೈಲಿಗೆ ನಮ್ ಪ್ಲಾನ್ ಇಂದ ಹೋದ್ಯೇನು..? ನಿನ್ನ ಹತ್ತಿರವಿದ್ದ ಅಕ್ರಮ ಆಸ್ತಿಯಿಂದ ಜೈಲಿಗೆ ಹೋದೆ. ನಾವು ಪ್ರಯತ್ನ ಮಾಡುವ ಅವಶ್ಯಕತೆಯೇ ಇಲ್ಲ. ನೀನು ತಿಹಾರ್​ಗೆ ಯಾಕೆ ಹೋಗಿಬಂದೆ ಎಂಬುದನ್ನು ರಾಜ್ಯದ ಜನರ ಮುಂದಿಡು. ನನ್ನ ಅಕೌಂಟ್ಸ್ ಎಲ್ಲಾನು ಸರಿಯಿತ್ತು. ಆದರೂ ಕರೆದುಕೊಂಡು ಹೋದ್ರು ಎಂದು ಹೇಳಲಿ. ರಾಜಕಾರಣ ಮಾಡುವುದಕ್ಕೂ ಒಂದು ಹಿತಿಮಿತಿ ಇರಬೇಕು ಎಂದು ಕಿಡಿಕಾರಿದರು.

Also read:  ಅತ್ತೆಯನ್ನು ಕೊಲ್ಲಲು ಸ್ಕೆಚ್​​: ಆಡಿಯೋದಿಂದ ಬಯಲಾಯ್ತು ಸೊಸೆಯ ಖತರ್ನಾಕ್ ಪ್ಲಾನ್

 

 

Latest article