Friday, January 21, 2022

‘ರಾಮನಗರ ಭಾಗದಲ್ಲಿ ತೋಳ್ಬಲದ ರಾಜಕಾರಣ ನಡಿತೀದೆ ಅಂದ್ರೆ, ಅದು ಅವರ ಅವನತಿಯ ಪ್ರತೀಕ’

Must read

ಶಿವಮೊಗ್ಗ: ಯಾವಾಗಲೂ ಬುದ್ದಿ ಬಲದ ಮೇಲೆ ರಾಜಕಾರಣ ಮಾಡಬೇಕು. ತೋಳು ಬಲದ ಮೇಲೆ ರಾಜಕಾರಣ ಮಾಡುವವರಿಗೆ ಏನು ಹೇಳುವುದಕ್ಕೆ ಆಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ರಾಮನಗರ ಭಾಗದಲ್ಲಿ ತೋಳ್ಬಲದ ರಾಜಕಾರಣ ನಡಿತೀದೆ ಎಂದರೆ ಅದು ಅವರ ಅವನತಿಯ ಪ್ರತೀಕ. ಅಭಿವೃದ್ಧಿ ಮಾತನಾಡುವುದು ಬಿಟ್ಟು ತೋಳೇರಿಸಿಕೊಂಡು ಹೋಗುವುದೇನಿತ್ತು. ತೋಳ್ಬಲದ ರಾಜಕಾರಣ ಬಿದ್ದು ಹೋಗಿರುವುದು ಹಿಂದೆ ಸಾಬೀತಾಗಿದೆ. ಅವರಿಗೂ ಮಾತನಾಡಲು ಅವಕಾಶ ಇತ್ತು. ಹಾಗಾದರೆ, ಇವರ ಪ್ರಕಾರ ವಿಧಾನಸಭೆಯಲ್ಲೂ ಹೊಡೆದಾಡಬೇಕೆ..? ಸಚಿವರು ಪ್ರಚೋದನೆಗೊಳ್ಳುವಂತಹ ಯಾವುದೇ ಮಾತನಾಡಿರಲಿಲ್ಲ.

ಅಶ್ವತ್ಥ ನಾರಾಯಣ ಅವರ ತಪ್ಪು ಕಾಣುತ್ತಿಲ್ಲ. ಇದರಲ್ಲಿ ಪೊಲೀಸ್ ವೈಫಲ್ಯವೂ ಇಲ್ಲ. ಮನೆ ಮನೆಗೆ ಹೋಗಿ ಕರೆಯಲು ಅದು ಯಾರ ಮನೆಯ ಕಾರ್ಯಕ್ರಮವೂ ಆಗಿರಲಿಲ್ಲ. ರಾಜಕಾರಣದ ಅವನತಿಯ ದಿನಗಳು, ಬಹಳ ಬೇಗ ಬಿದ್ದು ಹೋಗುತ್ತವೆ. ಇದು ಮದುವೆ ಮನೆನಾ ಸಚಿವರೇ ಹೋಗಿ ಕರೆಯುವುದಕ್ಕೆ. ಕಾರ್ಯಕ್ರಮಕ್ಕೆ ಅಧಿಕಾರಿಗಳು ಇನ್ವಿಟೇಷನ್ ಕೊಟ್ಟಿದ್ದಾರೆ ಎಂದರು ಹೇಳಿದ್ದಾರೆ.

Latest article