ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಅಸಾಧ್ಯವಾದುದ್ದು ಯಾವುದೂ ಇಲ್ಲ, ಕಾರ್ಯಕರ್ತ ತೀರಿಕೊಂಡಾಗ ಪರಿಹಾರ ನೀಡಲು ಬಂದಿದ್ದೆ, ನಮ್ಮ ಕಾರ್ಯಕರ್ತರ ಸಮಿತಿ ಶರಾವತಿ ಸಂತ್ರಸ್ಥರ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಂತ್ರಸ್ಥರಿಗೆ ಜಮೀನು ನೀಡಿದ್ದೆವು, ಯಾವುದೇ ರೈತರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದರು. ಬಂಗಾರಪ್ಪ ಅವರ ಅವಧಿಯಲ್ಲೂ ಬಗರ್ ಹುಕುಂ ಜಮೀನನ್ನು ರೈತರಿಗೆ ಮಂಜೂರು ಮಾಡಿದ್ದರು, ಕಾಗೋಡು ತಿಮ್ಮಪ್ಪ ಅವರು ಜಮೀನು ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು.
ಶರಾವತಿ ಸಂತ್ರಸ್ತರು ದೇಶ ಹಾಗೂ ರಾಜ್ಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡಿದ್ದಾರೆ, ಅವರಿಗೆ ಜಮೀನು ನೀಡುವ ಕೆಲಸ ಮಾಡಬೇಕು ಯಾರೋ ಒಬ್ಬ ಕೇಸ್ ಹಾಕಿದ ಎಂದು ಭೂಮಿ ವಾಪಸ್ ಪಡೆಯುವುದು ಸರಿಯಲ್ಲ, ಸಂತ್ರಸ್ತರಿಗೆ ಭೂಮಿ ಖಾಯಂಗೊಳಿಸುವ ಕೆಲಸ ಮಾಡಬೇಕು ಈ ಕೆಲಸ ನಾವು ಮಾಡುತ್ತೆವೆ. ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಈ ಬಗ್ಗೆ ಅಧ್ಯಯನ ಮಾಡಿದ್ದರು. ಬಿಜೆಪಿ ಸರ್ಕಾರ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡನೆ ಮಾಡದಿರುವುದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ರಾಜ್ಯದ ಬೇರೆ ಕಡೆ ಜಮೀನು ಕಳೆದುಕೊಂಡವರಿಗೆ ನಾವು ಬೇರೆ ಜಮೀನು ಕೊಡುವ ಜೊತೆಗೆ ಕೆಲಸವನ್ನೂ ಕೊಟ್ಟಿದ್ದೇವೆ. ಸಿಎಂ ಏನು ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ, ಸಂತ್ರಸ್ತರನ್ನು ಕೊಲ್ಲುವ ಕೆಲಸ ಮಾಡಿದ್ದಾರೆ. ಸಂತ್ರಸ್ತರನ್ನು ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ರೌಡಿಗಳು ಬಿಜೆಪಿ ಸೇರುವುದು ಪಕ್ಷದ ಸಂಸ್ಕೃತಿಯಾಗಿದ್ದು, ಬಿಜೆಪಿಯವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.