Tuesday, August 16, 2022

ಶಿವಮೊಗ್ಗದಲ್ಲಿ ಓಂ ಶಕ್ತಿ ಯಾತ್ರೆಗೆ ಹೋಗಿಬಂದ 6 ಜನರಿಗೆ ಕೋವಿಡ್​ ಪಾಸಿಟಿವ್

Must read

ಶಿವಮೊಗ್ಗ: ಜಿಲ್ಲೆಯಲ್ಲಿ ಓಂ ಶಕ್ತಿ ಯಾತ್ರೆಗೆ ಹೋಗಿಬಂದ 6 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಶಿವಮೊಗ್ಗದಿಂದ‌ 82 ಬಸ್​ಗಳಲ್ಲಿ 4,300ಕ್ಕೂ ಹೆಚ್ಚು ಮಹಿಳೆಯರು ತಮಿಳುನಾಡಿನ ಮೇಲ್ ಮರತ್ತೂರಿನಲ್ಲಿರುವ ಓಂ ಶಕ್ತಿ ದೇವಾಲಯ ತೆರಳಿದ್ದರು. ಯಾತ್ರೆ ಮುಗಿಸಿ ಬಂದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಜೊತೆಗೆ ಎಲ್ಲರನ್ನೂ ಹೋಮ್​ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಇಂದು ಅವರ ವರದಿ ಬಂದಿದ್ದು, 6 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟವರನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಓಂ ಶಕ್ತಿ ಯಾತ್ರೆಗೆ ಹೋಗಿ ಬಂದವರಲ್ಲಿ ಕೋವಿಡ್ ಸೋಂಕು ಧೃಢವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.

Latest article