Tuesday, August 16, 2022

‘ಮೋದಿ ತಲೆಯಲ್ಲಿನ ಒಂದು ಕೂದಲು ಅಲ್ಲಾಡಿದ್ರೂ ಈ ದೇಶದಲ್ಲಿ ಮುಸಲ್ಮಾನರು ಬದುಕಲಿಕ್ಕೆ ಸಾಧ್ಯವಿಲ್ಲ’

Must read

ಶಿವಮೊಗ್ಗ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಶಿವಮೊಗ್ಗ ನಗರ ಬಿಜೆಪಿಯಿಂದ ವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಿಂದೂಗಳು ಕಾನೂನು, ಸಂವಿಧಾನಕ್ಕೆ ಗೌರವ ಕೊಟ್ಟು ಕೈಕಟ್ಟಿ ಕುಳಿತಿದ್ದೇವೆ. ಹಗ್ಗ ಬಿಚ್ಚಿದರೆ ಏನಾಗುತ್ತದೆ ಎಂದು ಮುಸಲ್ಮಾನ ಸಮಾಜ ಯೋಚನೆ ಮಾಡಬೇಕು. ಭಯೋತ್ಪಾದಕತೆಗೆ ಮುಸಲ್ಮಾನರು ಕುಮ್ಮಕ್ಕು ಕೊಡುತ್ತಿದ್ದಾರೆ. ಖಂಡಿಸುವ ಕೆಲಸವನ್ನೇ ಮಾಡಲ್ಲ. ಶಿವಮೊಗ್ಗದಲ್ಲಿ ಒಂದಷ್ಟು ಬುದ್ಧಿಜೀವಿಗಳಿದ್ದಾರೆ. ಗುಂಡು ಹಾರಿಸಿಕೊಂಡು ಹೊಡೆಯಬೇಕು ಅನ್ನಿಸುತ್ತೆ.
ಹರ್ಷ ಕೊಲೆಯಾದ, ಅವರೆಲ್ಲಾ ಎಷ್ಟು ಮಾತನಾಡಿದ್ರು.

ನಾವು ಯಾರಿಗೂ ಕರೆ ಕೊಟ್ಟಿಲ್ಲ. ಮೋದಿ ತಲೆ ತೆಗೆಯುತ್ತೇವೆ ಎಂದು ಎಚ್ಚರಿಕೆ ಕೊಡ್ತಾರೆ ಅಂದರೆ ಎಷ್ಟು ಪೊಗರು ಇರಬೇಡ. ಮೋದಿ ತಲೆ ಅಲ್ಲ. ತಲೆಯಲ್ಲಿನ ಒಂದು ಕೂದಲು ಅಲ್ಲಾಡಿದರೂ ಸಾಕು. ಈ ದೇಶದಲ್ಲಿ ಮುಸಲ್ಮಾನರು ಬದುಕಲಿಕ್ಕೆ ಸಾಧ್ಯ ಇಲ್ಲ. ರಕ್ಷಣಾ ವ್ಯವಸ್ಥೆ ಇದಕ್ಕೆಲ್ಲಾ ಅವಕಾಶ ಮಾಡಿಕೊಡಬಾರದು. ಸಹನೆ ಹಿಂದೂಗಳ ಬಲ, ನಮ್ಮ ದೌರ್ಬಲ್ಯ ಅಲ್ಲ. ಯಾವುದೇ ಬಲಿದಾನಗಳು ವ್ಯರ್ಥವಾಗಲ್ಲ. ಹಿಂದೆ ಶಿವಮೊಗ್ಗದಲ್ಲಿ ಶಿವಮೂರ್ತಿ ಹತ್ಯೆಯಾದಾಗ ಹಿಂದೂ ಸಮಾಜ ಬಲಿಷ್ಟ ಆಯ್ತು..

ಇದನ್ನು ತಡೆಯೋಕೆ ಆಗದ ಕಾಂಗ್ರೆಸ್ ನಾಯಕರು ಅವರಿಗೆ ಬೆಂಬಲ ಕೊಡ್ತಾರೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಕ್ಕೆ ಸಾಕ್ಷಿ ಕೇಳಿದ್ದೇ ಕಾಂಗ್ರೆಸ್​​​​ನ ಜನತಾದಳದ ನಾಯಕರು. ಮುಸಲ್ಮಾನರನ್ನು ಅಪ್ಪಿಕೊಂಡು, ತಬ್ಬಿಕೊಂಡು ಭಯೋತ್ಪಾದಕತೆ ಸೃಷ್ಟಿ ಮಾಡ್ತಿರೋದು ಕಾಂಗ್ರೆಸ್ ನೇತೃತ್ವ. ನೀವು ಯಾರಿಗೆ ಹುಟ್ಟಿದ್ದೀರಿ ಎಂದು ನಾವು ಸಹ ಕೇಳಬೇಕಲ್ಲಾ? ಹಿಂದೂ ಸಮಾಜವನ್ನು ಕೆಣಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest article