Thursday, January 20, 2022

ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಗುಂಡಿಗೆ ಬಿದ್ದ ಬೈಕ್

Must read

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಬೈಕ್​ವೊಂದು ಗುಂಡಿಗೆ ಬಿದ್ದಿದ್ದು, ಸವಾರ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ದಿನಕ್ಕೊಂದು ಅವಾಂತರ ಸೃಷ್ಟಿಸುತ್ತಿದೆ. ನಗರಾದ್ಯಂತ ಗುಂಡಿಗಳು ಅಗೆದಿರುವುದರಿಂದ ಹಾಗೂ ಬ್ಯಾರಿಕೇಡ್​ ಅಳವಡಿಸದ ಕಾರಣ ಬೈಕ್, ಕಾರುಗಳು ಗುಂಡಿಯೊಳಗೆ ಸಿಲುಕಿ ವಾಹನ ಸವಾರರನ್ನು ಹೈರಾಣಾಗಿಸಿವೆ.

ನಿನ್ನೆ ತಡರಾತ್ರಿ ಸಹ ನಗರದ ಜೈಲ್ ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರನಿಗೆ ರಸ್ತೆಯಲ್ಲಿದ್ದ ಗುಂಡಿ ಕಾಣಿಸದೇ ನೇರವಾಗಿ ಗುಂಡಿಯೊಳಗೆ ಬಿದ್ದಿದ್ದಾನೆ. ಈ ವೇಳೆ ಸವಾರ ಬೈಕ್​ ಬಿಟ್ಟು ಪಕ್ಕಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.

Latest article