Monday, January 24, 2022

ವೀಕೆಂಡ್​ ಕರ್ಫ್ಯೂ ವಿರುದ್ಧ ಧ್ವನಿ ಎತ್ತಿದ ಆಟೋ ಚಾಲಕರು: ಸರ್ಕಾರ ವಿರುದ್ಧ ಆಕ್ರೋಶ

Must read

ಶಿವಮೊಗ್ಗ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಸರ್ಕಾರದ ಆದೇಶದ ವಿರುದ್ಧ ಶಿವಮೊಗ್ಗದ ಆಟೋ ಚಾಲಕರ ಆಕ್ರೋಶ ಹೊರಹಾಕಿದ್ದಾರೆ.

ಕೊರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ಎಲ್ಲರೂ ಸಂಕಷ್ಟ ಅನುಭವಿಸಿದ್ದೇವೆ. ವಾರದ ರಜಾ ದಿನಗಳಲ್ಲಿ ಒಂದಷ್ಟು ಪ್ರವಾಸಿಗರನ್ನು ನಿರೀಕ್ಷೆ ಮಾಡುತ್ತೇವೆ. ಹೀಗೆ ಏಕಾಏಕಿ ನಿರ್ಬಂಧ ಮಾಡಿದರೆ ಅಂದಿನ ದುಡಿಮೆಯನ್ನು ನಂಬಿಕೊಂಡವರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ಇನ್ನು ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿ ಮಾಡಲಿ ಆದರೆ, ವೀಕೆಂಡ್ ಕರ್ಫ್ಯೂ ಮಾತ್ರ ಬೇಡ ಎಂದು ಒತ್ತಾಯಿಸಿದ್ದಾರೆ.

Latest article