Wednesday, May 18, 2022

ಶಿವಮೊಗ್ಗದಲ್ಲಿ ನಿರಂತರ ಮಳೆ: ತುಂಗಾ ಜಲಾಶಯ ಭರ್ತಿ

Must read

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಗಾಜನೂರು ತುಂಗಾ ಜಲಾಶಯ ಭರ್ತಿಯಾಗಿದೆ.

ಜಿಲ್ಲೆಯ ನದಿಗಳು ಹಾಗೂ ಡ್ಯಾಂಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ತುಂಗಾ ಜಲಾಯಶದ 22 ಕ್ರಸ್ಟ್ ಗೇಟ್​​ಗಳ ಪೈಕಿ 21ಗೇಟ್​​ಗಳನ್ನು ತೆರೆಯಲಾಗಿದೆ.

ಜಲಾಶಯದಿಂದ ಒಟ್ಟು 5,300 ಕ್ಯೂಸೆಕ್​​ ನೀರು ಬಿಡುಗಡೆ ಮಾಡಲಾಗಿದ್ದು, ಒಟ್ಟು 7,300 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ತುಂಗಾ ಜಲಾಶಯ ಕಳೆದ ತಿಂಗಳಲ್ಲೇ ಗರಿಷ್ಟ ಮಟ್ಟ ತಲುಪಿದ್ದು, ಕಳೆದ ಮೂರು ದಿನಗಳ ವರುಣನ ಆರ್ಭಟಕ್ಕೆ ಸಂಪೂರ್ಣ ಭರ್ತಿಯಾಗಿದೆ.

Latest article