ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಪ್ರಪಾತದತ್ತ ನುಗ್ಗಿರುವ ಘಟನೆ ಆಗುಂಬೆ ಘಾಟ್ನಲ್ಲಿ ನಡೆದಿದೆ.
ಶಿವಮೊಗ್ಗದಿಂದ ಭತ್ತ ತುಂಬಿಕೊಂಡು ಬಂದ ಟ್ರಕ್ ಆಗುಂಬೆ ಘಾಟಿಯ ಆರು ಹಾಗೂ ಏಳನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದ ಕಡೆ ವಾಲಿದೆ.
ಪ್ರಪಾತಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಉಕ್ಕಿನ ತಡೆಗೋಡೆ ಮೇಲೆ ಟ್ರಕ್ ನಿಂತಿದ್ದು, ಅರ್ಧ ಟ್ರಕ್ ಹೆದ್ದಾರಿ ಕಡೆ ಇದ್ದರೆ, ಇನ್ನರ್ಧ ಟ್ರಕ್ ಪ್ರಪಾತದ ಕಡೆ ನುಗ್ಗಿದೆ. ತಡೆಗೋಡೆಯಿಂದ ಸಂಭವಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ.
ಘಟನೆಯಲ್ಲಿ ಟ್ರಕ್ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.